ಗುರುವಾರ , ಮಾರ್ಚ್ 4, 2021
18 °C
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಚೇತನ್

ಜ್ಞಾನದಿಂದ ಬದಲಾವಣೆ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹರಿಹರ: ಜ್ಞಾನ ಜಗತ್ತನ್ನೇ ಆಳುತ್ತದೆ. ಜ್ಞಾನದ ಸಂಪಾದನೆಗೆ ಈ ರೀತಿಯ ಅಧ್ಯಯನ ಶಿಬಿರಗಳು ಸಹಕಾರಿಯಾಗಬಲ್ಲವು ಎಂದುಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದರು.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪದ ಪ್ರೋ.ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಡಿಎಸ್-4 ಸಮಿತಿ ವತಿಯಿಂದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಬದಲಾಗಬೇಕು ಎಂದಾದಲ್ಲಿ ಜ್ಞಾನದ ಅಗತ್ಯವಿದೆ. ಪ್ರತಿಯೊಬ್ಬರು ಅದನ್ನು ಸಂಪಾದಿಸಿದಾಗ ಸಮಾಜ ತನ್ನಿಂದ ತಾನೇ ಬದಲಾಗುತ್ತದೆ. ಅನ್ಯಾಯಕ್ಕೆ ಒಳಗಾಗಿರುವ ದಲಿತರಿಗೆ ನ್ಯಾಯ ಸಿಗಬೇಕು ಎಂದರೆ ದೇಶದ ಪ್ರಸ್ತುತ ವಿದ್ಯಮಾನಗಳ ಜತೆಗೆ ನ್ಯಾಯ-ಅನ್ಯಾಯಗಳ  ಜ್ಞಾನ ತುಂಬುವ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಹೇಳಿದರು.

ದೇಶಕ್ಕೆ ಅಂಬೇಡ್ಕರ್ ನೀಡಿದ ತತ್ವ ಸಿದ್ಧಾಂತಗಳಿಂದ ನಾವು ಸದೃಢ ಹಾಗೂ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಬಹುದು. ಸಂವಿಧಾನದಲ್ಲಿ ಸರ್ವರಿಗೂ ಅವಕಾಶವಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಲ್ಲಿ ಅಂಬೇಡ್ಕರ್ ಕಂಡ ಕನಸಿನ ಭಾರತ ನಿರ್ಮಾಣ ಮಾಡಬಹುದು ಎಂದು ಕರೆ ನೀಡಿದರು.

ಡಾ.ಎಚ್. ವಿಶ್ವನಾಥ, ‘ದೇಶ ಶಾಂತಿಯುತವಾಗಿರಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ. ಅವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಹೋರಾಡಿದವರಲ್ಲ. ಸಮಾನತೆಗೆ ಹೋರಾಟ ಮಾಡಿದವರು. ಅವರ ತತ್ವ ಸಿದ್ಧಾಂತಗಳನ್ನು ಅನಿಷ್ಠಾನಕ್ಕೆ ಯತ್ನಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದರು.

ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಹೆಗ್ಗೆರೆ ರಂಗಪ್ಪ, ಸಮಿತಿಯ ಪದಾಧಿಕಾರಿಗಳಾದ ಎಂ. ಸಂತೋಷ್, ಕೆ.ಸಿ. ಮೂರ್ತಿ, ಟಿ. ಬಸವರಾಜ್, ಕೃಷ್ಣಪ್ಪ, ಬಾಬುರಾವ್, ಸಿಪಿಐ ಗುರುನಾಥ, ಪಿಎಸ್‍ಐಗಳಾದ ಸಿದ್ದೇಗೌಡ, ಮೇಘರಾಜ್ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.