ಗುರುವಾರ , ಜನವರಿ 21, 2021
30 °C

ರಾಜಕೀಯ ವಿಪ್ಲವಗಳಾಗಲಿವೆ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಗ್ರಹಣದ ಪರಿಣಾಮ ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗಲಿದೆ. ಅಮೆರಿಕದಲ್ಲಿ ಆಯಿತು. ಜಗ ತ್ತಿನ ಬೇರೆ ಬೇರೆ ದೇಶಗಳಲ್ಲಿ ಆಗುತ್ತಲಿದೆ. ಭಾರತದಲ್ಲಿಯೂ ಆಗಲಿದೆ’ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ಒಬ್ಬೊ ಬ್ಬರ ಬಗ್ಗೆ ನಿರ್ದಿಷ್ಟವಾಗಿ ಹೇಳು ವುದಿಲ್ಲ. ಆದರೆ, ಮುಂದಿನ 2 ತಿಂಗಳ ಕಾಲ ವಿಪ್ಲವ ಆಗುವುದು ನಿಜ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಸಿರಿವಂತ ಮಗ ಹುಟ್ಟಿ ಆಳುವನು ಮುನಿಪುರವ. ಯುದ್ಧವಿಲ್ಲದ ಮಣಿಯೇ ಪುರವೆಲ್ಲ ಕೂಡಾದೀತು ಎಂದು ಹಿಂದೆಯೇ ಹೇಳಿದ್ದೆ. ಮುನಿಪುರ ಅಂದರೆ ಅಮೆರಿಕ. ಅಲ್ಲಿ ಮೊನ್ನೆ ಹೋದನಲ್ಲ ಅವನ ಬಗ್ಗೆ ಹೇಳಿದ್ದು’ ಎಂದು ಟ್ರಂಪ್‌ ಬಗ್ಗೆ ತಿಳಿಸಿದರು.

‘ಕೊರೊನಾ ಹೊಸ ಕಾಯಿಲೆ ಅಲ್ಲ. ಗಂಟಲು, ಶ್ವಾಸಕೋಶ ಕಾಯಿಲೆಗಳು ಹಿಂದೆಯೇ ಇದ್ದವು. ಸ್ವಚ್ಛತೆಯ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ತಿಳಿವಳಿಕೆ, ಜ್ಞಾನ, ಬುದ್ಧಿ ಇರುವ ಮನುಷ್ಯ ಅಜ್ಞಾನದ ದಾರಿ ಹಿಡಿದಾಗ ಕಾಯಿಲೆಗಳು ಬರುತ್ತವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು