ಸಾಸ್ವೆಹಳ್ಳಿ: ಹೋಬಳಿಯ ಬೈರನಹಳ್ಳಿ ಹೊರವಲಯದ ಶ್ರೀನಿಧಿ ಎಸ್ಟೇಟ್ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ಹಿಡಿಯಲು ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದಾರೆ.

ಶನಿವಾರ ರಾತ್ರಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ ಎಂದು ಗ್ರಾಮದ ಜಿವಿಎಂ ರಾಜು ತಿಳಿಸಿದ್ದಾರೆ.
‘ಈ ಭಾಗದಲ್ಲಿ ಚಿರತೆಯೊಂದು ಬಹಳ ದಿನಗಳಿಂದ ಓಡಾಡಿಕೊಂಡಿದೆ. ಎರಡು ತಿಂಗಳ ಹಿಂದೆ ನಮ್ಮ ಮನೆಯ ಕಾರಿನ ಕೆಳಗೆ ಮಲಗಿದ್ದ ನಾಯಿಯನ್ನು ತಿಂದುಹಾಕಿದೆ’ ಎಂದು ಜಿ. ವೀರಶೇಖರಪ್ಪಹೇಳಿದರು.

ಹಟ್ಟಿಹಾಳು, ಚಿಲಾಪುರ, ಬೈರನಹಳ್ಳಿ ಭಾಗದ ಹಲವು ನಾಯಿಗಳನ್ನು ಚಿರತೆ ತಿಂದುಹಾಕಿದೆ. ಈ ಭಾಗದ ರೈತರು ಹೊಲ, ಮನೆ ಕೆಲಸ ಮಾಡುವಾಗ ಒಬ್ಬೊಬ್ಬರಾಗಿ ಓಡಾಡದೆ, ಗುಂಪಿನಲ್ಲಿ ಓಡಾಡಬೇಕು. ಚಿರತೆ ಸೆರೆಗೆ ಬೋನು ಇಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಮೈಲಾರಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.