ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್‌: 525 ಪ್ರಕರಣ ಇತ್ಯರ್ಥ

Last Updated 9 ಫೆಬ್ರುವರಿ 2020, 10:27 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಗಂಭೀರ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿಮೋಟರ್ ವಾಹನ ಪರಿಹಾರ, ಕೌಟುಂಬಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ವಿವಿಧ ಪ್ರಕರಣ ಸೇರಿ 525 ಪ್ರಕರಣಗಳನ್ನು ಬಗೆಹರಿಸಲಾಯಿತು.

ಹಣ, ಶ್ರಮ, ವೇಳೆ ಕಡಿಮೆ ಮಾಡಿ ನೊಂದವರಿಗೆ ಶೀಘ್ರ ನ್ಯಾಯದಾನ ನೀಡುವ ಲೋಕ ಅದಾಲತ್‌ನಲ್ಲಿ ಹಲವರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ನಿರಾಳರಾದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆಂಗಬಾಲಯ್ಯ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಸ್‌. ನಾಗಶ್ರೀನೇತೃತ್ವದಲ್ಲಿ 3775 ಪ್ರಕರಣಗಳಲ್ಲಿ 525 ಪ್ರಕರಣಗಳನ್ನು ರಾಜೀ ಸಂಧಾನ ಮಾಡಲಾಯಿತು. ಇಲ್ಲಿರಾಜಿ ಆಗುವ ಪ್ರಕರಣಗಳಿಗೆ ಅಂತಿಮ ತೀರ್ಪು ನೀಡಲಾಯಿತು. ಇವುಗಳ ವಿರುದ್ಧ ಮೇಲ್ಮನವಿಗೆ ಅವಕಾಶ ಇರುವುದಿಲ್ಲ.

ಬ್ಯಾಂಕಿನ ಬಾಕಿ ಪ್ರಕರಣ, ರಾಜೀಯಾಗಬಲ್ಲ ಅಪರಾಧ ಪ್ರಕರಣ, ವಿದ್ಯುತ್‌ ಬಿಲ್‌, ಕಾರ್ಮಿಕ ವ್ಯಾಜ್ಯ, ಜಮೀನು ವ್ಯಾಜ್ಯ, ವೈವಾಹಿಕ ಪ್ರಕರಣ, ನೀರಿನ ಕರ ಬಾಕಿ ಸೇರಿ ಸಿವಿಲ್‌ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.

ಒಟ್ಟು ₹4.44 ಕೋಟಿ ಮೊತ್ತ ಇತ್ಯರ್ಥಗೊಂಡಿತು. 352 ಬಾಕಿ ಪ್ರಕರಣಗಳಲ್ಲಿ ₹ 3.02 ಕೋಟಿ ಮೊತ್ತ ಬಗೆಹರಿಸಲಾಯಿತು.

ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಗೀತಾ, ನಿವೃತ್ತ ನ್ಯಾಯಾಧೀಶ ಹಾಲಪ್ಪ, ವಕೀಲರಾದ ಅನೀಸ್‌ ಪಾಷಾ, ಮಾರುತಿ, ವಕೀಲರು ಇದ್ದರು.


ಪ್ರಕರಣಗಳು→ರಾಜಿಗೆ ಕೈಗೆತ್ತಿಕೊಂಡ ಪ್ರಕರಣಗಳು→ಇತ್ಯರ್ಥಗೊಂಡ ಪ್ರಕರಣಗಳು

ಬ್ಯಾಂಕ್‌ ಪ್ರಕರಣಗಳು→753→87

ರಾಜೀಯಾಗಬಲ್ಲ ಅಪರಾಧ ಪ್ರಕರಣ→156→4

ವಿದ್ಯುತ್‌ ಬಿಲ್‌ ಬಾಕಿ ಪ್ರಕರಣ→1056→81

ಕಾರ್ಮಿಕ ವ್ಯಾಜ್ಯ→3→0

ಜಮೀನು ವ್ಯಾಜ್ಯ ಪ್ರಕರಣ→15→0

ವಾಹನ ಅಪಘಾತ ಪ್ರಕರಣ→217→40

ವೈವಾಹಿಕ ಪ್ರಕರಣ→53→5

ಚೆಕ್‌ ಅಮಾನ್ಯ ಪ್ರಕರಣ→412→50

ಇತರೆ ಸಿವಿಲ್ ಪ್ರಕರಣ→566→88

ಇತರೆ→514→158

ನೀರಿನ ಬಿಲ್‌ ಬಾಕಿ ಪ್ರಕರಣ→30→12

ಒಟ್ಟು→3775→525

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT