ಭಾನುವಾರ, ಅಕ್ಟೋಬರ್ 17, 2021
21 °C

ಸಂತೇಬೆನ್ನೂರು: ಸೂಳೆಕೆರೆ ಹಳ್ಳದ ರಭಸಕ್ಕೆ ಉರುಳಿ ಬಿದ್ದ ಲಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಧಾರಾಕಾರ ಮಳೆಯಾಯಿತು. ಗುಡುಗು ಸಹಿತ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ವಿರಾಮ ನೀಡಿದೆ.

ದೊಡ್ಡಘಟ್ಟ ಹಾಗೂ ಚಿರಡೋಣಿ ನಡುವೆ ಸೂಳೆಕೆರೆ ಹಳ್ಳದ ರಭಸಕ್ಕೆ ಸೇತುವೆ ದಾಟುತ್ತಿದ್ದಾಗ ಪಡಿತರ ರಾಗಿ ತುಂಬಿದ್ದ ಲಾರಿ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಸಂತೇಬೆನ್ನೂರಿನ ಕೋಟೆ ರಸ್ತೆ ಭಾಗದಲ್ಲಿ ಮೂರು ಮನೆಗಳ ಗೋಡೆ ಕುಸಿದಿವೆ. ಹಿರೇಕೊಗಲೂರಿನಲ್ಲಿ ಒಂದು ಮನೆಗೆ ಹಾನಿಯಾಗಿದೆ.

ಮಹಮದ್ ಇಸ್ಮಾಯಿಲ್ ಎಂಬುವವರ ಮನೆಯ ಮಹಡಿ ಗೋಡೆ ಸಂಪೂರ್ಣ ಕುಸಿದಿದೆ. ಸುಜಾತ ಲಕ್ಷ್ಮಣಪ್ಪ, ಗಂಗಮ್ಮ ಕರಿಯಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಳೆಯಿಂದ ಮೆಕ್ಕೆಜೋಳ ತೆನೆ ಮುರಿಯುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.