ಹರಿಹರದ ಮೈತ್ರಿವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಿಗ ಪ್ರಾಧ್ಯಾಪಕರ 2ನೇ ರಾಜ್ಯ ಮಟ್ಟದ ಸಮಾವೇಶವನ್ನು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿದರು
ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಸಂವಿಧಾನಕ್ಕಾಗಲೀ ನ್ಯಾಯಾಲಯಕ್ಕಾಗಲೀ ಅಥವಾ ಕೇಂದ್ರ ಸರ್ಕಾರಕ್ಕಾಗಲೀ ಇಲ್ಲವೆ ಇಲ್ಲ ಎಂಬ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಕೆಲವರು ಬಿತ್ತಿದ್ದರು.
– ಎ.ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ
ಯಾರೂ ಕೇಳದಿದ್ದರೂ ಕೇಂದ್ರ ಸರ್ಕಾರವು ಆರ್ಥಿಕ ದುರ್ಬಲರಿಗೆಂದು (ಇಡಬ್ಲುಎಸ್) ಶೇ 10ರಷ್ಟು ಮೀಸಲಾತಿಯ ಉಡುಗೊರೆ ನೀಡಿದೆ. ಮೀಸಲಾತಿಯನ್ನು ಸಾಮಾಜಿಕ ಹಿಂದುಳಿಯುವಿಕೆ ಆಧರಿಸಿ ನೀಡಬೇಕೆ ಹೊರತು ಆರ್ಥಿಕ ಹಿಂದುಳಿಯುವಿಕೆ ಆಧರಿಸಿ ಅಲ್ಲ.
– ಎ.ಬಿ.ರಾಮಚಂದ್ರಪ್ಪ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ