ಮಲೇಬೆನ್ನೂರು: ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಗುಳದಳ್ಳಿ ಸಂಕ್ಲೀಪುರ ಹಳ್ಳ ಉಕ್ಕಿ ಹರಿದಿದ್ದು, ಅಂದಾಜು 60 ಎಕರೆ ಹೊಲ, ಗದ್ದೆಗಳು ಜಲಾವೃತವಾಗಿವೆ.

ಜಿಗಳಿ ಗ್ರಾಮದಲ್ಲಿ 25 ಎಕರೆ ಭತ್ತದ ಗದ್ದೆ ಹಳ್ಳದ ನೀರಿನಲ್ಲಿ ಮುಳುಗಿದ್ದರೆ, ಹರಳಹಳ್ಳಿ ಹಾಗೂ ಗುಡ್ಡದ ಬೇವಿನಹಳ್ಳಿ ಗ್ರಾಮದಲ್ಲಿ 2 ಮನೆಗಳಿಗೆ ಹಾನಿಯಾಗಿದೆ.

ತೋಟದ ಬೆಳೆಗೆ ಮಳೆ ಅನುಕೂಲವಾಗಿದ್ದರೆ, ಮೆಕ್ಕೆ ಜೋಳ ಕಟಾವು ಮಾಡುವುದು ಕಷ್ಟವಾಗಿದೆ. ಒಣಗಿದ್ದ ತೆನೆ ತೊಯ್ದು ತೇವವಾಗಿದೆ ಎಂದು ರೈತ ಫಾಜಿಲ್ ತಿಳಿಸಿದರು. ಭತ್ತದ ಬೆಳೆಗೆ ಸೊಳ್ಳೆ ಕಾಟ ನಿಯಂತ್ರಣ ಆಗಿದೆ ಎಂದು ರೈತ ಹೊಸಳ್ಳಿ ಕರಿಬಸಪ್ಪ ತಿಳಿಸಿದರು.

ಸ್ಥಳಕ್ಕೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಬಿದ್ದ ಸ್ಥಳಕ್ಕೆ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.