ಗುವಾಹಟಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಶುಕ್ರವಾರ) ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶದ ಗೆಲುವಿಗೆ ನ್ಯೂಜಿಲೆಂಡ್ 228 ರನ್ಗಳ ಗುರಿ ಒಡ್ಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ನಿಗದಿತ 50 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು.

ಕಿವೀಸ್ನ ಆರಂಭ ಉತ್ತಮವಾಗಿರಲಿಲ್ಲ. 38 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಶತಕದ ಜೊತೆಯಾಟ ಕಟ್ಟಿದ ನಾಯಕಿ ಸೋಫಿ ಡಿವೈನ್ ಹಾಗೂ ಬ್ರೂಕ್ ಹ್ಯಾಲಿಡೇ ತಂಡವನ್ನು ಮುನ್ನಡೆಸಿದರು.

ಸೋಫಿ ಹಾಗೂ ಬ್ರೂಕ್ ನಾಲ್ಕನೇ ವಿಕೆಟ್ಗೆ 112 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.

ಬ್ರೂಕ್ 69 ಹಾಗೂ ಸೋಫಿ 63 ರನ್ಗಳ ಆಕರ್ಷಕ ಇನಿಂಗ್ಸ್ ಕಟ್ಟಿದರು. ಬಾಂಗ್ಲಾ ಪರ ರಬೆಯಾ ಕಾನ್ ಮೂರು ವಿಕಟ್ ಗಳಿಸಿದರು.

ಸತತ ಎರಡು ಸೋಲುಗಳನ್ನು ಕಂಡಿರುವ ನ್ಯೂಜಿಲೆಂಡ್ ಟೂರ್ನಿಯಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಅತ್ತ ಬಾಂಗ್ಲಾದೇಶ ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದಿದೆ.
.ಮಹಿಳಾ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಮಂದಾನ: 28 ವರ್ಷ ಹಳೆ ರೆಕಾರ್ಡ್ ಬ್ರೇಕ್.Womens WC| ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿಗೆ ಇವರೇ ಕಾರಣ: ಹರ್ಮನ್ಪ್ರೀತ್ ಬೇಸರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.