ಲಖನೌ: ಭಾರತದ ಅನುಭವಿ ಡಬಲ್ಸ್ ಆಟಗಾರ್ತಿಯರಾದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಸೈಯದ್ ಮೋದಿ ಇಂಟರ್ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು.

₹2.14 ಕೋಟಿ ಬಹುಮಾನದ ಈ ಟೂರ್ನಿಯಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ, ಹಾಲಿ ಚಾಂಪಿಯನ್ನರಾದ ಟ್ರೀಸಾ– ಗಾಯತ್ರಿ ಜೋಡಿ 19–21, 22–20, 21–9 ರಿಂದ ಮಲೇಷ್ಯಾದ ಚೆಂಗ್ ಸು ಹುಯಿ– ತಾನ್ ಝಿಂಗ್ ಯಿ ಜೋಡಿಯನ್ನು ಸೋಲಿಸಿತು.

ಪ್ರಿಯಾ ಕೊಂಜೆಂಗ್ಬಾಮ್– ಶ್ರುತಿ ಮಿಶ್ರಾ ಜೋಡಿ 21–8, 21–11 ರಿಂದ ಪೀವಾ ಇವಾಂಜಲಿನ್– ಸಮೃದ್ಧಿ ಸಿಂಗ್ ಜೋಡಿಯನ್ನು ಸುಲಭವಾಗಿ ಸೋಲಿಸಿ ಎರಡನೇ ಸುತ್ತು ತಲುಪಿತು.

ಪುರುಷರ ವಿಭಾಗದಲ್ಲಿ ಐದನೇ ಶ್ರೆಯಾಂಕದ ಹರಿಹರನ್ ಮ್ಸಕರುಣನ್– ಎಂ.ಆರ್.ಅರ್ಜುನ್ ಜೋಡಿ 21–11, 21–13 ರಿಂದ ಆಯುಷ್ ಮಖಿಜಾ– ಸುಜೆಯ್ ತಂಬೋಲಿ ಜೋಡಿಯನ್ನು ಮಣಿಸಿ ಮುನ್ನಡೆಯಿತು. ಎರಡನೇ ಶ್ರೇಯಾಂಕದ ಪೃಥ್ವಿ ಕೃಷ್ಣಮೂರ್ತಿ ರಾಯ್– ಸಾಯಿ ಪ್ರತೀಕ್ ಜೋಡಿ 21–8, 21–17 ರಿಂದ ಸ್ವರ್ಣರಾಜ್ ಬೋರಾ– ನಿಬಿರ್ ರಂಜನ್ ಜೋಡಿಯನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.