ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ರಸ್ತೆ ಜಲಾವೃತ

Last Updated 11 ಆಗಸ್ಟ್ 2022, 5:39 IST
ಅಕ್ಷರ ಗಾತ್ರ

ಮಲೇಬೆನ್ನೂರು: ಮಳೆಯಿಂದತುಂಗಭದ್ರಾ ನದಿಯಲ್ಲಿ ಉಂಟಾಗಿರುವ ಪ್ರವಾಹ ಬುಧವಾರವೂ ಮುಂದುವರಿದಿದ್ದು ಉಕ್ಕಡಗಾತ್ರಿ ಸಂಪರ್ಕಿಸುವ ಫತ್ಯಾಪುರ, ತುಮ್ಮಿನಕಟ್ಟೆ ಮಾರ್ಗದ ರಸ್ತೆ ಜಲಾವೃತವಾಗಿದೆ.

ಕರಿಬಸವೇಶ್ವರ ಗದ್ದುಗೆಯ ಸ್ನಾನಘಟ್ಟ, ಜವಳದ ಕಟ್ಟೆ ನೀರಿನಲ್ಲಿ ಮುಳುಗಿವೆ. ಜಮೀನುಗಳಲ್ಲಿ ಕೆಸರು ತುಂಬಿದ್ದು ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ನೀರು ಇಳಿಯಲು ಒಂದು ವಾರವಾದರೂ ಬೇಕು. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನೆಯಾಗಿದೆ ಎಂದು ನದಿ ಪಾತ್ರದ ರೈತ ಸಣ್ಣ ಸಂಜೀವರೆಡ್ಡಿ ತಿಳಿಸಿದರು. ಜನರು ನದಿಪಾತ್ರಕ್ಕೆ ತೆರಳದಂತೆ ಗ್ರಾಮಾಡಳಿತ ಎಚ್ಚರಿಕೆ ನೀಡಿದೆ. ತಾಲ್ಲೂಕು ಆಡಳಿತ ವಿಕೋಪ ಎದುರಿಸಲು ಸನ್ನದ್ಧವಾಗಿದೆ.

ಗಡಿ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದ್ದರು. ಕಡಾರನಾಯ್ಕನಹಳ್ಳಿ ಗ್ರಾಮದಲ್ಲಿ ಒಂದು ಮನೆ ಕುಸಿದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT