ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದವರೆಲ್ಲ ಆರೋಗ್ಯವಾಗಿದ್ದೇವೆ: ಸಂಸದ ಸಿದ್ದೇಶ್ವರ

ಮನೆಯಲ್ಲೇ ಉಳಿಯಲು ನಾಗರಿಕರಿಗೆ ಮನವಿ
Last Updated 26 ಮಾರ್ಚ್ 2020, 15:50 IST
ಅಕ್ಷರ ಗಾತ್ರ

ದಾವಣಗೆರೆ: ‘ನನ್ನ ಮಗಳಿಗೆಕೊರೊನಾ ಸೋಂಕು ಬಂದಿದ್ದು, ಆಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡುತ್ತಿರುವುದಕ್ಕೆ ಬೇಸರವಾಗುತ್ತಿದೆ. ಆಕೆ ಆರೋಗ್ಯವಾಗಿದ್ದಾಳೆ. ಬಹುಶಃ ಎರಡು–ಮೂರು ದಿನಗಳಲ್ಲಿ ಮನೆಗೆ ವಾಪಸಾಗಬಹುದು’ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.

‘ನನ್ನ ಮೊಮ್ಮಗಳು, ಅಮೆರಿಕ ಹಾಗೂ ಲಂಡನ್‌ನಿಂದ ಬಂದಿರುವ ನನ್ನ ಇಬ್ಬರು ಮಕ್ಕಳು, ನನಗೆ ಹಾಗೂ ಹೆಂಡತಿಗೆ ಕೊರೊನಾ ನೆಗೆಟಿವ್‌ ಇದೆ ಎಂದು ವರದಿ ಬಂದಿದೆ’ ಎಂದು ಹೋಮ್‌ ಕ್ವಾರಂಟೈನ್‌ನಲ್ಲಿರುವ ಸಂಸದರು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಕರೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಹೋಮ್‌ ಕ್ವಾರಂಟೈನ್‌ನಲ್ಲಿದ್ದೇವೆ. ನೂರಾರು ಜನ ನನಗೆ ದೂರವಾಣಿ ಕರೆ ಮಾಡಿ ಮಗಳು ಚೆನ್ನಾಗಿದ್ದಾಳಾ ಎಂದು ಕೇಳುತ್ತಿದ್ದಾರೆ. ಮಗಳು ಹಾಗೂ ನಮ್ಮ ಕುಟುಂಬದವರೆಲ್ಲರೂ ಆರೋಗ್ಯವಾಗಿದ್ದೇವೆ’ ಎಂದು ತಿಳಿಸಿದ್ದಾರೆ.

‘ನನಗೆ ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಎಲ್ಲರೂ ಮನೆಯಲ್ಲೇ ಇದ್ದು, ದೇಶ ಹಾಗೂ ಕರ್ನಾಟಕದ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಏಪ್ರಿಲ್‌ 14ರ ನಂತರ ನಾವೆಲ್ಲರೂ ಭೇಟಿಯಾಗಿ ಬೇವು–ಬೆಲ್ಲ ಸವಿಯೋಣ. ಎಲ್ಲರೂ ಆರೋಗ್ಯವಾಗಿರೋಣ’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT