ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೀಲೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ವಿತರಣೆ

Published : 2 ಆಗಸ್ಟ್ 2024, 15:31 IST
Last Updated : 2 ಆಗಸ್ಟ್ 2024, 15:31 IST
ಫಾಲೋ ಮಾಡಿ
Comments

ಚೀಲೂರು (ನ್ಯಾಮತಿ): ಗ್ರಾಮದ ರಾಷ್ಟ್ರೀಯ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿಯಿಂದ ‘ಪ್ರಜಾವಾಣಿ’ ದಿನಪತ್ರಿಕೆ ವಿತರಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ, ಸಾಮಾಜಿಕ ಕಾರ್ಯಕರ್ತ ಪುರುವಂತರ ಪರಮೇಶ್ವರಪ್ಪ ವಿದ್ಯಾರ್ಥಿಗಳಿಗೆ ಪತ್ರಿಕೆ ವಿತರಿಸಿ ಮಾತನಾಡಿ, ‘ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಪ್ರತಿಯೊಬ್ಬರು ‘ಪ್ರಜಾವಾಣಿ’ ಓದುಗರೇ ಆಗಿದ್ದಾರೆ’ ಎಂದರು.

ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ಪತ್ರಿಕೆ ಒದಗಿಸುವ ಕಾರ್ಯಕ್ಕೆ ಸಹಕರಿಸಿದ ಗ್ರಾಮ ಪಂಚಾಯಿತಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಯೋಜನೆ ರೂಪಿಸಿರುವ ದಿ ಪ್ರಿಂಟರ್ಸ್‌ ಮೈಸೂರು ಲಿಮಿಟಿಡ್ ಸಂಸ್ಥೆಯನ್ನು ಶ್ಲಾಘಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮತ್ತು ಸದಸ್ಯರು, ಪಿಡಿಒ ಯೋಗೇಶನಾಯ್ಕ ಅವರು ಶಾಲೆಗೆ ಪತ್ರಿಕೆ ವಿತರಣೆಗೆ ಸಹಕಾರ ನೀಡಿದರು.  

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎಲ್.ಚಂದ್ರನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಬಾಬು, ಶಿಕ್ಷಕರಾದ ಎಸ್.ಪೂರ್ಣಿಮಾ, ಎಚ್.ಎಸ್. ಪ್ರಿಯಾದರ್ಶಿನಿ, ಡಿ.ಪಿ.ಆಶಾ, ಯಲ್ಲಪ್ಪ ದೊಡ್ಡಮನಿ, ಡಿ.ಎಚ್.ಸತೀಶ, ಎಚ್.ಎಂ.ತಿಪ್ಪೇಶಪ್ಪ, ಎಚ್.ಎನ್.ಮಂಜುನಾಥ, ಸಿಬ್ಬಂದಿ ಆರ್.ಲೋಕೇಶ, ಜೆ.ಸುಹಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT