ನ್ಯಾಮತಿ: ‘ಭಾರತದಲ್ಲಿ ಜನಿಸಿದ ನಾವೆಲ್ಲರೂ ಭಾರತೀಯರು. ಕೋಮು–ದ್ವೇಷ ಬೆಳಸಿಕೊಳ್ಳಬಾರದು. ನಾವೆಲ್ಲ ಕನ್ನಡಿಗರು ಒಂದೇ ಎಂಬ ಭಾವನೆ ಇರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯಕಾರಿ ಸದಸ್ಯ ಸೈಯದ್ ಅಪ್ಸರ್ ಪಾಷ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶನಿವಾರ ನಡೆದ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಈ ಸಮಯದಲ್ಲಿ ಭಾರತೀಯ ಸೈನಿಕರಿಗೆ ನಾವೆಲ್ಲರೂ ನೈತಿಕ ಬೆಂಬಲ ನೀಡೋಣ ಎಂದರು.

ಸ್ವಾತಂತ್ರ್ಯ ಹೋರಾಟಗಾರ ನ್ಯಾಮತಿ ಸೊಂಡೂರು ಹಾಲಪ್ಪ ದಂಪತಿ ಬಗ್ಗೆ ಅವರ ಪುತ್ರ ಎನ್.ಎಸ್.ಅರುಣಕುಮಾರ ಮಾಹಿತಿ ನೀಡಿದರು.

ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಮಾದನಬಾವಿ ಜಾನಪದ ಕಲಾವಿದರ ಸಂಘಟಕಿ ಜಿ.ಎಂ.ಮಂಜುಳಾ, ಕಸಾಪ ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸದಸ್ಯರಾದ ವೆಂಕಟೇಶನಾಯ್ಕ, ಈ ಸುಮಲತಾ, ಜಿ.ಷಡಕಪ್ಪ, ಬಸವತತ್ವ ಪ್ರಚಾರಕಿ ಸನ್ಯಾಸಿ ಕೊಡಮಗ್ಗಿ ಸೌಭಾಗ್ಯ, ಆರುಂಡಿ ಮಂಜಪ್ಪ, ಸೊಂಡೂರು ಮಹೇಶ್ವರಪ್ಪ, ದಾನಿಹಳ್ಳಿ ಉಮಾಭಾರತಿ, ಪುಷ್ಪಾ, ಎಸ್ಜೆಎಂ ಮಮತಾ, ರೇಖಾ ಗಜಾನನ, ಸತೀಶ ಬಿದರಕಟ್ಟೆ ಇದ್ದರು.

ಪುಟಾಣಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.