ಕುಂಕುವ (ನ್ಯಾಮತಿ): ನ್ಯಾಮತಿ ತಾಲ್ಲೂಕು ಕುಂಕುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

11 ಜನ ನಿರ್ದೇಶಕರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಬಿ.ಸುನೀಲ ಮತ್ತು ಎಂ.ಆರ್.ಬಾಲಚಂದ್ರಪ್ಪ ನಾಮಪತ್ರ ಸಲ್ಲಿಸಿದ್ದರು. ಪಿ.ಬಿ.ಸುನೀಲ ಅವರಿಗೆ 7 ಮತಗಳು, ಎಂ.ಆರ್. ಬಾಲಚಂದ್ರ ಅವರಿಗೆ 3 ಮತಗಳು ಚಲಾವಣೆಯಾಗಿದ್ದು, ಒಬ್ಬ ನಿರ್ದೇಶಕರು ಗೈರಾಗಿದ್ದರು. ಹಾಗಾಗಿ ಪಿ.ಬಿ.ಸುನೀಲ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಒಡೆಯರಹತ್ತೂರು ಎಸ್.ವೀರೇಶ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಲ್.ಸತೀಶನಾಯ್ಕ ಘೋಷಿಸಿದರು.

ಎಂ.ಜಿ.ನಾಗರಾಜ, ಜಿ.ನಾಗರಾಜಪ್ಪ, ಎಂ.ರುದ್ರೇಶಪ್ಪ, ಕೆ.ಎಚ್.ದೂದಾನಾಯ್ಕ, ಗಜೇಂದ್ರಪ್ಪ, ಕೆ.ಎಚ್.ಜಗದೀಶ, ಸಾವಿತ್ರಮ್ಮ, ಎಂ.ಆರ್.ಬಾಲಚಂದ್ರಪ್ಪ ಪಾಲ್ಗೊಂಡಿದ್ದರು.

ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಜಿ.ಬಿ.ವೆಂಕಟೇಶ ಮತ್ತು ಸಿಬ್ಬಂದಿ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.