ಸೋಮವಾರ, ನವೆಂಬರ್ 30, 2020
20 °C

ನಮ್ಮದು ನ್ಯಾಯ ಪರ ನಿಲುವು: ವಚನಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ‘ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯಿಂದ ವಿನಯ ಕುಲಕರ್ಣಿ ಕುಟುಂಬ ಅಘಾತಕ್ಕೊಳಗಾಗಿರುವ ಕಾರಣ ಅವರ ಕುಟುಂಬಕ್ಕೆ ಸ್ವಾಂತನ ಹೇಳಿರುವುದು ನಿಜ. ಆದರೆ, ನಮ್ಮ ನಿಲುವು ನಿರಂತರವಾಗಿ ನ್ಯಾಯದ ಪರವಾಗಿರುತ್ತದೆ’ ಎಂದು ವೀರಶೈವ ಪಂಚಮಸಾಲಿ ಲಿಂಗಾಯತ ಗುರುಪೀಠದ ವಚನಾನಂದ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ವಿನಯ್‌ ಕುಲಕರ್ಣಿ ಮನೆಗೆ ಭೇಟಿ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ವಿನಯ ಕುಲಕರ್ಣಿ ಅವರು ತಪ್ಪು ಮಾಡಿದ್ದರೇ ಕಾನೂನು ಪ್ರಕ್ರಿಯೆ ನಡೆಯಲಿ. ಆದರೆ, ವಿನಾಕಾರಣ ಅವರನ್ನು ರಾಜಕೀಯ ಪ್ರೇರಿತ ಕಾರಣಗಳಿಂದ ಸಿಲುಕಿಸಿದಲ್ಲಿ ಸಮಾಜ ಸಹಿಸುವುದಿಲ್ಲ. ಸಮಾಜದ ಪ್ರತಿ ಭಕ್ತರ ಪ್ರತಿಯಾಗಿ ಶ್ರೀ ಪೀಠದ ಕಾಳಜಿ ಸದಾ ಏಕರೀತಿಯಾಗಿರುತ್ತದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.