ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಸ್ಟರ್ ಬಟ್ಟೆಯಲ್ಲಿ ರಾಷ್ಟ್ರಧ್ವಜ: ಆಕ್ರೋಶ

Last Updated 13 ಆಗಸ್ಟ್ 2022, 11:42 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರವು ಖಾದಿ ಮೂಲೆಗುಂಪು ಮಾಡಿ ಪಾಲಿಸ್ಟರ್ ಬಟ್ಟೆಯಲ್ಲಿ ಭಾರತದ ಧ್ವಜ ಮಾಡಿಸಿರುವುದನ್ನು ನೋಡಿದರೆ ದೇಶಪ್ರೇಮ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಖಾದಿ ಗ್ರಾಮೋದ್ಯೋಗ, ಗುಡಿ ಕೈಗಾರಿಕೆಗಳು ಅಭಿವೃದ್ಧಿ ಆಗಬೇಕು. ಅದನ್ನು ಬಿಟ್ಟು ಯಾರಿಗೋ ಗುತ್ತಿಗೆ ನೀಡಿ ಖಾದಿಯಲ್ಲಿ ಧ್ವಜ ರೂಪಿಸದೇ ಇರುವುದು ದೇಶಕ್ಕೆ ಮಾಡಿರುವ ಅಪಮಾನ ಎಂದು ಇಲ್ಲಿವರೆಗಿನ ಎಲ್ಲ ಸ್ವಾತಂತ್ರ್ಯ ಉತ್ಸವಗಳನ್ನು ಕಂಡಿರುವ ಹಿರಿಯರಾದ ಜೆ.‌ ಕೆ. ಕೊಟ್ರಬಸಪ್ಪ ಕಿಡಿಕಾರಿದ್ದಾರೆ.

ಖಾದಿ ಬಟ್ಟೆಯಲ್ಲಿ ಧ್ವಜ ರೂಪಿಸಬೇಕು. ಮೊದಲಿನಿಂದಲೇ ಎಲ್ಲರೂ ಇದನ್ನೇ ಮಾಡಿಕೊಂಡು ಬಂದಿರುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪಾಲಿಸ್ಟರ್ ಬಟ್ಟೆಯಲ್ಲಿ ತಯಾರಿಸಿರುವ ಧ್ವಜಗಳನ್ನು‌ ಕೂಡಲೇ ಹಿಂಪಡೆಯಬೇಕು. ಯಾರನ್ನೋ ಓಲೈಕೆ ಮಾಡುವುದನ್ನು ಬಿಟ್ಟು ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಕೆಲಸ ಮಾಡಿ‌ ಎಂದು ಆಗ್ರಹಿಸಿದ್ದಾರೆ.

ಹರ್ ಘರ್ ತಿರಂಗಾ ಅವಶ್ಯಕತೆ ಇಲ್ಲ. ಖಾದಿ ಬಟ್ಟೆಗಳಲ್ಲಿ ರೂಪಿಸಿದ ಬಾವುಟಗಳನ್ನು ಮನೆ ಮೇಲೆ ಹಾರಿಸಬೇಕು. ಈಗ ಮಾಡಿರುವ ಯಡವಟ್ಟು ತಿದ್ದಿಕೊಳ್ಳಬೇಕು. ಈ ಮೂಲಕ ರಾಷ್ಟ್ರಪ್ರೇಮ ತೋರಿಸಿ ಎಂದು ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅನೇಕ ಕುಟುಂಬಗಳ ಮನೆಗಳಿವೆ. ಅವರನ್ನು ಗುರುತಿಸುವ ಕೆಲಸ ಮಾಡಿಲ್ಲ. ಯಾರ್ಯಾರಿಗೋ ಸನ್ಮಾನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೆಲವೇ ಜನರು ಮಾತ್ರ ಸ್ವಾತಂತ್ರ್ಯ ಹೋರಾಟ ಮಾಡಿರುವವರು ಇರೋದು. ಅಂಥವರನ್ನು ಗುರುತಿಸುವ ಕೆಲಸ ಮಾಡಬೇಕಿತ್ತು. ಆದ್ರೆ ಇದು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT