ದಾವಣಗೆರೆ: ‘ಪಂಚಮಸಾಲಿ ಸಮುದಾಯದಲ್ಲಿ ಗೊಂದಲ ಮೂಡಿಸಲು ನಾಯಕರು ಏಪ್ರಿಲ್ 19 ಹಾಗೂ 20ರಂದು ಪ್ರತ್ಯೇಕ ಸಭೆ ಕರೆದಿದ್ದಾರೆ. ಇಂತಹ ಗೊಂದಲಗಳಿಗೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ಎರಡೂ ಸಭೆಗಳನ್ನು ಮುಂದೂಡಲಾಗಿದೆ’ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.

‘ಪಂಚಮಸಾಲಿ ಸಮುದಾಯದ 2 ‘ಎ’ ಮೀಸಲಾತಿ ಹೋರಾಟ ಸೇರಿದಂತೆ ಹಲವು ವಿಷಯಗಳ ಚರ್ಚೆ ಕುರಿತು ಏಪ್ರಿಲ್ 20ರಂದು ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಇದಕ್ಕೆ ಪ್ರತಿಯಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಅವರೂ ಏಪ್ರಿಲ್ 19ರಂದು ಸಮುದಾಯದ ಮುಖಂಡರ ಸಭೆ ಕರೆದಿದ್ದರು. ಇದರಿಂದ ಸಮುದಾಯದಲ್ಲಿ ಗೊಂದಲ ಮೂಡಿತ್ತು. ಈ ಕಾರಣ ಸ್ವಾಮೀಜಿ ಹಾಗೂ ಕಾಶಪ್ಪನವರ ಇಬ್ಬರೊಂದಿಗೆ ಮಾತನಾಡಿದ್ದು, ಸದ್ಯ ಎರಡೂ ಸಭೆ ಸ್ಥಗಿತಗೊಳಿಸಿದ್ದೇವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಪ್ರಮುಖ ಬೇಡಿಕೆ ಪಂಚಮಸಾಲಿ ಸಮುದಾಯದ 2 ‘ಎ’ ಮೀಸಲಾತಿ ಕೊಡಬೇಕು ಎನ್ನುವುದು. ಸದ್ಯ ಅದಕ್ಕೆ ಆದ್ಯತೆ. ಇದನ್ನು ಬಿಟ್ಟು ಸಮುದಾಯದ ನಾಯಕರು ವೈಯಕ್ತಿಕ ದ್ವೇಷದಿಂದ ಪ್ರತ್ಯೇಕ ಸಭೆ ಕರೆಯುವುದು ಸರಿಯಲ್ಲ. ಈ ಬಗ್ಗೆ ಕಾಶಪ್ಪನವರ ಸೇರಿದಂತೆ ಎಲ್ಲ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಮಾಜಿ ಶಾಸಕ ಎ.ಬಿ. ಪಾಟೀಲ ಅವರ ನೇತೃತ್ವದಲ್ಲಿ ಮೀಸಲಾತಿ ಹೋರಾಟದ ರೂಪರೇಷೆ ಹೇಗಿರಬೇಕು ಎಂಬ ಬಗ್ಗೆ ಸಭೆ ಕರೆದು ಚರ್ಚಿಸುತ್ತೇವೆ’ ಎಂದರು.

‘ಶಾಸಕ ವಿಜಯಾನಂದ ಕಾಶಪ್ಪನವರ ಅವರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಇದರಿಂದ ಸಮುದಾಯದವರಿಗೆ ನೋವಾಗಿದೆ. ಮುಖಂಡರು ಸ್ವಾಮೀಜಿ ಸೇರಿದಂತೆ ಯಾರ ಬಗ್ಗೆಯೂ ನಿಂದನೆ ಮಾಡದೆ ಸಂಯಮ ಕಾಯ್ದುಕೊಳ್ಳಬೇಕು’ ಎಂದು ಮನವಿ ಮಾಡಿದ ಅವರು, ‘ಯತ್ನಾಳ ಅವರದ್ದು ಪಕ್ಷದ ವಿಚಾರ. ಇಂತಹ ವಿಷಯದಲ್ಲಿ ಯತ್ನಾಳ ಅವರಿಗೆ ಬೆಂಬಲ ನೀಡುವುದು ಸರಿಯಲ್ಲ ಎಂದು ಸ್ವಾಮೀಜಿಗೂ ತಿಳಿಸಿದ್ದೇನೆ’ ಎಂದದು ಹೇಳಿದರು.

‘ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಕಾಶಪ್ಪನವರ ಎಲ್ಲರೂ ಬೇರೆ ಬೇರೆಯಾಗಿದ್ದಾರೆ. ಇದರಿಂದ ಸಂಘಟನೆಗೆ ಹಿನ್ನೆಡೆಯಾಗಿದೆ. ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರಲು ಎ.ಬಿ. ಪಾಟೀಲ ಅವರ ನೇತೃತ್ವದಲ್ಲಿ ಸಭೆ ನಡೆಸಲಿದ್ದೇವೆ’ ಎಂದರು.

‘ರಾಜ್ಯ ಸರ್ಕಾರ ಜಾಗಿ ಗಣತಿ ಹೆಸರಿನಲ್ಲಿ ಜನರ ಜತೆ ಚೆಲ್ಲಾಟ ಆಡುತ್ತಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ವರದಿಯನ್ನು ‘ಜಾತಿ ಗಣತಿ’ ಎನ್ನುವುದೇ ತಪ್ಪು. ಇದು ಸಮೀಕ್ಷೆ ಅಷ್ಟೇ. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ಹೇಳಿದರು.

‘ಒಂದೊಂದು ಸಮುದಾಯದ ಜನಸಂಖ್ಯೆಯ ಬಗ್ಗೆ ತಪ್ಪು ಲೆಕ್ಕ ಕೊಡುತ್ತಾ ಸಮುದಾಯದ ಜನರಲ್ಲಿ ಪರಸ್ಪರ ದ್ವೇಷ ಮೂಡಿಸಲಾಗುತ್ತಿದೆ. ಇದು ಖಂಡನೀಯ. ೀ ಮೂಲಕ ಪಂಚಮಸಾಲಿ ಸಮುದಾಯದ ಶಕ್ತಿ ಕುಂದಿಸುವ ಕೆಲಸ ನಡೆಯುತ್ತಿದೆ. ಜಾತಿ ಗಣತಿ ಒಪ್ಪುವುದಿಲ್ಲ. ಈ ಕುರಿತು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ನನ್ನ ಬೆಂಬಲ ಇದೆ’ ಎಂದರು.

''ಜಾತಿ ಗಣತಿ ವರದಿ ಸಂಬಂಧ ಲಿಂಗಾಯತ ಸಮುದಾಯದ ನಾಯಕರು ಪಕ್ಷಬೇಧ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ಸಮಂಜಸವಲ್ಲದ ವರದಿ ಒಪ್ಪುವುದಿಲ್ಲ. ಮರು ಸಮೀಕ್ಷೆ ಮಾಡಿ"'

-ಎಚ್.ಎಸ್. ಶಿವಶಂಕರ್ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.