ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ: ಆಂಗ್ಲ ನಾಮಫಲಕ ತೆರವುಗೊಳಿಸಲು ಕರವೇ ಆಗ್ರಹ

Published 18 ಡಿಸೆಂಬರ್ 2023, 16:09 IST
Last Updated 18 ಡಿಸೆಂಬರ್ 2023, 16:09 IST
ಅಕ್ಷರ ಗಾತ್ರ

ಹರಿಹರ: ಆಂಗ್ಲ ಭಾಷೆಯಲ್ಲಿರುವ ನಗರದ ಅಂಗಡಿ, ಮಳಿಗೆಗಳ ನಾಮಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡರ ನೇತೃತ್ವ) ಕಾರ್ಯಕರ್ತರು ಸೋಮವಾರ ನಗರಸಭೆ ಮುಂದೆ ಪ್ರತಿಭಟಿಸಿ ಎಇಇ ತಿಮ್ಮೆಶಪ್ಪ ಅವರಿಗೆ ಮನವಿ ನೀಡಿದರು.

ನಾಮಫಲಕಗಳಲ್ಲಿ ಕನ್ನಡ ಭಾಷೆಯು ಶೇ 90ರಷ್ಟು, ಉಳಿದ ಭಾಗ ಅನ್ಯ ಭಾಷೆಯಲ್ಲಿರಬಹುದೆಂದು ಸರ್ಕಾರ ಸ್ಪಷ್ಟವಾಗಿ ಆದೇಶ ನೀಡಿದ್ದರೂ ಆ ಆದೇಶ ಜಾರಿ ಮಾಡುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕರವೇ ನಗರ ಘಟಕದ ಅಧ್ಯಕ್ಷ ಶಶಿನಾಯ್ಕ ಹೇಳಿದರು.

‘ನಗರದ ಬಹುತೇಕ ಅಂಗಡಿ, ಮುಂಗಟ್ಟುಗಳು ಹಾಗೂ ಇತರೆಡೆ ಇರುವ ಪ್ರಚಾರದ ನಾಮಫಲಕಗಳಲ್ಲಿ ಆಂಗ್ಲ ಭಾಷೆಯೇ ರಾರಾಜಿಸುತ್ತಿದೆ. ಈ ಹಿಂದೆ ಕರವೇ ಕಾರ್ಯಕರ್ತರು ಹಲವು ಬಾರಿ ಆಂಗ್ಲ ಭಾಷೆ ನಾಮಫಲಕಗಳಿಗೆ ಕರಿ ಮಸಿ ಬಳಿದು ಪ್ರತಿಭಟನೆ ಮಾಡಿದ್ದರೂ ನಾಮಫಲಕ ಅಳವಡಿಸಿದವರರಾಗಲೀ ನಗರಸಭೆ ಅಧಿಕಾರಿಗಳಾಗಲೀ ಎಚ್ಚೆತ್ತಿಲ್ಲ’ ಎಂದು ಆರೋಪಿಸಿದರು.

‘ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿರುವವರ ವಿರುದ್ಧ ದಂಡ ವಿಧಿಸಲು ನಗರಸಭೆಯವರು ಏಕೆ ಹಿಂಜರಿಯುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಗೌರವ ಸಿಗದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಮುಂಬರುವ ಜ. 1ರೊಳಗೆ ಈ ಕುರಿತು ನಗರಸಭೆಯವರು ಕ್ರಮ ಕೈಗೊಂಡರೆ ಸರಿ, ತಪ್ಪಿದಲ್ಲಿ ಕರವೇ ಕಾರ್ಯಕರ್ತರು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ್ ಎಚ್., ಉಪಾಧ್ಯಕ್ಷ ಅಮಾನುಲ್ಲಾ, ಕಾರ್ಯದರ್ಶಿ ಯಮನೂರು ಪದಾಧಿಕಾರಿಗಳಾದ ಮೆಹಬೂಬ್ ಅಲಿ, ಇಬ್ರಾಹೀಂ ಖಲೀಲ್, ಬರ್ಕತ್ ಅಲಿ, ಮಂಜುನಾಥ್ ಆರ್, ಸಾದಿಖ್ ಅಹ್ಮದ್, ಫಯಾಜ್ ಖಾನ್, ಮುಸ್ತಫಾ ಖಾನ್, ಹಜರತ್ ಅಲಿ, ಜಬಿಉಲ್ಲಾ, ದಾದಾಪೀರ್, ಸಿರಾಜ್ ಅಹ್ಮದ್, ಇಸ್ಮಾಯಿಲ್ ಜಬಿಉಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT