ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಬುಧವಾರ ತಡರಾತ್ರಿ ಬಿರುಸಿನ ಮಳೆಯಾದರೆ, ಇನ್ನು ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆಗೆ ಹಲವಾರು ಹಳ್ಳಗಳು ತುಂಬಿ ಹರಿದಿವೆ.
ಜೋಳದಹಾಳ್ 51 ಮಿ.ಮೀ, ಕತ್ತಲಗೆರೆ 48.2, ಬಸವಾಪಟ್ಟಣ 30.1, ಕೆರೆಬಿಳಚಿ 24.2, ತ್ಯಾವಣಗಿ 36.2, ಉಬ್ರಾಣಿ 9.8, ಚನ್ನಗಿರಿ 8 , ದೇವರಹಳ್ಳಿ 8.8, ಸಂತೇಬೆನ್ನೂರಿನಲ್ಲಿ 6 ಮಿಮೀ ಮಳೆಯಾಗಿದೆ. ಯಾವುದೇ ಹಾನಿಯಾಗಿಲ್ಲ ಎಂದು ತಹಶೀಲ್ದಾರ್ ಕೆ.ಆರ್. ರುಕ್ಮಿಣಿಬಾಯಿ ತಿಳಿಸಿದ್ದಾರೆ.
ಪಟ್ಟಣದ ಹೊರ ವಲಯದಲ್ಲಿರುವ ಹರಿದ್ರಾವತಿ, ಕಾಕನೂರು ಗ್ರಾಮದ ಹಿರೇಹಳ್ಳ ತುಂಬಿ ಹರಿಯುತ್ತಿವೆ ಹಾಗೂ ಹಲವಾರು ಚೆಕ್ ಡ್ಯಾಂಗಳು ತುಂಬಿವೆ. ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ನೀರು ನಿಂತಿದೆ. ಮಳೆಯಿಂದಾಗಿ ಅಡಿಕೆ ಕೊಯ್ಲು ಮಾಡಲು ಅಡ್ಡಿಯಾಗಿದೆ.
ಬೆಳಿಗ್ಗೆಯಿಂದ ಸಂಜೆವರೆಗೂ ಚೆನ್ನಾಗಿ ಬಿಸಿಲು ಇದ್ದು, ರಾತ್ರಿಯ ವೇಳೆ ಎರಡು ದಿನಗಳಿಂದ ಮಳೆಯಾಗುತ್ತಿದೆ.