ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಬೆನ್ನೂರು: ಪುಷ್ಕರಣಿಯ ಜಲಹರಿ ಮಂಟಪದಲ್ಲಿ ಜಲಧಾರೆ

Published 20 ಮೇ 2024, 13:47 IST
Last Updated 20 ಮೇ 2024, 13:47 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಗ್ರಾಮದಲ್ಲಿ ಸೋಮವಾರ ಸುರಿದ ಭಾರಿ ಮಳೆಯು ಐತಿಹಾಸಿಕ ಪುಷ್ಕರಣಿಯ ಜಲಹರಿ ಮಂಟಪದಲ್ಲಿ ಜಲಧಾರೆ ಸೃಷ್ಟಿಸಿದೆ. ಮಳೆ ನೀರೇ ಪುಷ್ಕರಣಿಯ ಜಲಮೂಲವಾಗಿದ್ದು, ದಕ್ಷಿಣ ದಿಕ್ಕಿನಲ್ಲಿರುವ ಆನೆಗುಂಡಿಯಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿದೆ. 

ನೆಲದಾಳದಲ್ಲಿ ನಿರ್ಮಿಸಿರುವ ಶಿಲಾನಾಲೆಯ ಮೂಲಕ ನೀರು ಪುಷ್ಕರಣಿಗೆ ಸಾಗುತ್ತದೆ. ನೀರು ಧುಮುಕಲು ನಿರ್ಮಿಸಿರುವ ಜಲಹರಿ ಮಂಟಪವನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ. ಜೋರು ಮಳೆ ಬಂದಾಗ ದೃಶ್ಯ ವೈಭವ ಕಾಣಬಹುದು. 

ಹೋಬಳಿಯಾದ್ಯಂತ ಸತತ 3 ದಿನ ಸುರಿಯುತ್ತಿರುವ ಮಳೆಯಿಂದ ಕೆರೆ, ಹಳ್ಳ, ಕೊಳ್ಳಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಬರಗಾಲದ ಬವಣೆಗೆ ಮುಂಗಾರು ಪೂರ್ವ ಮಳೆ ಭರವಸೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT