ಹರಿಹರ: ‘ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಪ್ರಬಲ ಹೋರಾಟ ಮಾಡಿ 200 ವರ್ಷ ಸಂದ ಸ್ಮರಣೆಯಲ್ಲಿ ಇಲ್ಲಿನ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದಿಂದ ಸ್ವತಂತ್ರ ಭಾರತದ ರಥಯಾತ್ರೆಯನ್ನು ಆಯೋಜಿಸಲಾಗಿದೆ’ ಎಂದು ಗುರುಪೀಠದ ವಚನಾನಂದ ಶ್ರೀ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಣಿ ಚೆನ್ನಮ್ಮನವರು ಈ ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ, ಅವರ ಶೌರ್ಯ, ಪರಾಕ್ರಮವನ್ನು ಇಂದಿನ ತಲೆಮಾರಿನವರಿಗೆ ತಿಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ರಾಣಿ ಚೆನ್ನಮ್ಮನವರ ಐಕ್ಯ ಸ್ಥಳ ಬೆಳಗಾವಿ ಜಿಲ್ಲೆ ಬೈಲಹೊಂಗಲದಿಂದ ಅ.23ರಿಂದ ಆರಂಭವಾಗುವ ರಥಯಾತ್ರೆ ರಾಜ್ಯದ 16 ಜಿಲ್ಲೆಗಳಲ್ಲಿ ಒಂದು ವರ್ಷದ ಅವಧಿವರೆಗೆ ಸಂಚರಿಸಲಿದೆ. ಜಿಲ್ಲಾ, ತಾಲ್ಲೂಕು ಕೇಂದ್ರಗಳ ಜೊತೆಗೆ ಗ್ರಾಮೀಣ ಭಾಗದಲ್ಲೂ ಯಾತ್ರೆ ಸಾಗಲಿದೆ’ ಎಂದರು.

ತುಂಗಾರತಿ:

‘ನಗರದ ನದಿ ದಡದಲ್ಲಿ ನಿರ್ಮಿಸಿರುವ ತುಂಗಾರತಿ ಲೋಕಾರ್ಪಣೆಗೆ ಆಗಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಲಾಗಿದೆ. ತುಂಗಾರತಿ ಸ್ಥಳದಲ್ಲಿ ಎಂಟು ಮಂಟಪಗಳ ಮೇಲೆ ಮಹಾಪುರುಷರ ಮೂರ್ತಿಗಳನ್ನು ಹಾಗೂ ತುಂಗಭದ್ರಾ ದೇವಸ್ಥಾನ ಸ್ಥಾಪಿಸುವ ಉದ್ದೇಶವಿದೆ. ಲೋಕಾರ್ಪಣೆ ಸಮಾರಂಭದ ದಿನಾಂಕ ಶೀಘ್ರವೇ ನಿಗದಿಯಾಗಲಿದೆ’ ಎಂದರು.

ಗುರುಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಆಡಳಿತಾಧಿಕಾರಿ ರಾಜಕುಮಾರ್, ಪ್ರಕಾಶ್ ಪಾಟೀಲ್, ಚಂದ್ರಶೇಖರ ಪೂಜಾರಿ, ಮಲ್ಲಿನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.