ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಶೀಟರ್ ಬುಳ್ಳ ನಾಗ ಕೊಲೆ: ಮಾಜಿ ಕಾರ್ಪೋರೇಟರ್ ಸೇರಿ 18 ಆರೋಪಿಗಳ ಬಂಧನ

Last Updated 22 ಮೇ 2019, 11:06 IST
ಅಕ್ಷರ ಗಾತ್ರ

ದಾವಣಗೆರೆ:ರೌಡಿಶೀಟರ್ ನಾಗರಾಜ್ ಅಲಿಯಾಸ್ ಬುಳ್ಳನಾಗನ ಕೊಲೆ ಪ್ರಕರಣ ಸಂಬಂಧ ಪೊಲೀಸರು 18 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಚೇತನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಗಳ ಮಾಹಿತಿ ನೀಡಿದರು.

ದಾವಣಗೆರೆಯ ಸಂತೋಷ್‌ಕುಮಾರ್ ಕೆ. ಅಲಿಯಾಸ್‌ ಕಣುಮ (34), ಎ.ಪರಶುರಾಮ್ ಅಲಿಯಾಸ್ ಪರಸ (27) ಕೆ.ವಿಜಯನಾಯ್ಕ ಅಲಿಯಾಸ್ ವಿಜಿ (25) ಪವನ್‌ಕುಮಾರ್ ಅಲಿಯಾಸ್ ಅಂಡಿ (20), ಮಹಾಂತೇಶ ಅಲಿಯಾಸ್ ಮಾಂತೇಶ(20) ಜಿ.ನವೀನ್‌ ಅಲಿಯಾಸ್ ಪಟ್ಲಿ(19), ಪಿ.ರಾಕೇಶ್ ಅಲಿಯಾಸ್ ರಾಕಿ(19), ಎಂ.ಮಂಜುನಾಥ ಅಲಿಯಾಸ್ ಖಾರದಪುಡಿ ಮಂಜ(19) ಎಸ್‌.ವಿಜಯ ಅಲಿಯಾಸ್ ಟಿಟಿ ವಿಜಯ(18), ಶಿವಕುಮಾರ್ ಅಲಿಯಾಸ್ ಕಬಡ್ಡಿ ಶಿವು(27), ಎ.ಮೈಲಾರಿ (22), ರಮೇಶ ಅಲಿಯಾಸ್ ಆರ್‌.ಎಕ್ಸ್‌ ರಾಮ (24), ಎನ್‌.ಮನೋಜ ಅಲಿಯಾಸ್ ಕೊಲಂಬಿ(19) ಶ್ರೀನಿವಾಸ ಅಲಿಯಾಸ್‌ ಮೋಟ್ ಬೆರಳು ಸೀನಾ (43), ಸುಬಾನಿ ಅಲಿಯಾಸ್ ಗಬ್ಬರ್(24), ರಾಬಿ ಅಲಿಯಾಸ್‌ ಎ.ಐ.ಜೆ ಕುಮಾರ್ (44), ನೀಲಗಿರಿ ಅಲಿಯಾಸ್ ನಿಖಿಲ್ (37), ಪರಮೇಶಿ ಅಲಿಯಾಸ್‌ ಪರ್ಮಿ (30) ಬಂಧಿತರು.

ಶ್ರೀನಿವಾಸ್ ಅಲಿಯಾಸ್‌ ಮೋಟ್‌ಬೆಳ್ ಶೀನಾ ನಗರಪಾಲಿಕೆ ಮಾಜಿ ಸದಸ್ಯ. ವೈಯಕ್ತಿಕ ದ್ವೇಷ ಇದ್ದು, ಕೊಲೆಗೆ ಇದೇ ಕಾರಣ ಎಂದು ಹೇಳಲಾಗಿದ್ದು, ಕೊಲೆ ಪತ್ತೆಗೆ ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನಂತರ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ’ ಚೇತನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT