19 ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಪ್ರತಿ ಟನ್ ಮರಳಿಗೆ ₹ 850 ದರ ನಿಗದಿ ಮಾಡಲಾಗಿದೆ. ಪರಿಸರ ನಿರಾಕ್ಷೇಪಣಾ ಪತ್ರ ಸಿಕ್ಕ ತಕ್ಷಣ ಮರಳು ಪೂರೈಕೆ ಆಗಲಿದೆ
ಸಿ.ಆರ್.ರಶ್ಮಿ ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ
ಒ.ಸಿ ಮತ್ತು ಸಿ.ಸಿ.ಯಿಂದಾಗಿ ಕಟ್ಟಡ ನಿರ್ಮಾಣ ಉದ್ಯಮ ಸೊರಗಿದೆ. ಮನೆ ಕಟ್ಟಲು ನಿರ್ಧರಿಸಿದವರು ಕೂಡ ಕಾದು ನೋಡುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿರುವ ಉದ್ಯಮಗಳನ್ನೂ ಬಾಧಿಸಿದೆ
ಪ್ರವೀಣ್ ಕುಮಾರ್ ಸಿವಿಲ್ ಎಂಜಿನಿಯರ್
ಒ.ಸಿ. ಮತ್ತು ಸಿ.ಸಿ ಗೊಂದಲದಿಂದಾಗಿ ಕಟ್ಟಡ ನಿರ್ಮಾಣ ಚಟುವಟಿಕೆ ಸ್ಥಗಿತವಾಗಿದೆ. ಚಿಕ್ಕ ನಿವೇಶನದ ಕಟ್ಟಡಗಳಿಗೆ ಪರಿಹಾರ ಸಿಕ್ಕಿದ್ದರೂ ವಾಣಿಜ್ಯ ಉದ್ದೇಶ ದೊಡ್ಡ ನಿವೇಶನದ ಕಟ್ಟಡದ ಗೊಂದಲ ಮುಂದುವರಿದಿದೆ