ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣುಮಕ್ಕಳ ಬದುಕಿನ ಬೆಳಕಾದ ಸಾವಿತ್ರಿಬಾಯಿ’

Last Updated 4 ಜನವರಿ 2023, 6:08 IST
ಅಕ್ಷರ ಗಾತ್ರ

ದಾವಣಗೆರೆ: ಮೇಲುಜಾತಿಯ ಹೆಣ್ಣುಮಕ್ಕಳು ಕೂಡ ಶಾಲೆಗೆ ಹೋಗದೆ, ಶಿಕ್ಷಣವನ್ನು ಪಡೆಯದೆ ಅಂಧಕಾರದಲ್ಲಿ ಗುಲಾಮರಂತೆ ಬದುಕುವ ಕಾಲದಲ್ಲಿ ಹೆಣ್ಣುಮಕ್ಕಳ ಬದುಕಿನ ಬೆಳಕಾಗಿ ಬಂದವರು ಸಾವಿತ್ರಿಬಾಯಿ ಫುಲೆ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಎಂ. ಕರಿಬಸಪ್ಪ ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಮಂಗಳವಾರ ನಡೆದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

200 ವರ್ಷಗಳ ಹಿಂದೆ ಭಾರತದ ಕಲ್ಪನೆಯಿಲ್ಲದೆ ಚಿಕ್ಕ ಚಿಕ್ಕರಾಜ್ಯಗಳಾಗಿದ್ದವು. ಶೋಷಿತ ಸಮುದಾಯದವರು, ಅತಿಶೂದ್ರರು ಅಸ್ಪೃಶ್ಯರು ಅವರ ಜೀವನ ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದರು. ಅವರನ್ನು ಯಾರು ಕೂಡ ಮುಟ್ಟಿಸಿಕೊಳ್ಳದೆ ಶೂದ್ರರು ತಮ್ಮ ಸೊಂಟದ ಸುತ್ತಲು ಪೊರಕೆಯಂತೆ ಮರದ ರೆಂಬೆ ಎಲೆಯನ್ನು ಕಟ್ಟಿಕೊಂಡು ತಾವು ಮುಟ್ಟಿದ ನೆಲವನ್ನು ಗುಡಿಸುತ್ತ ಸಾಗಬೇಕಿತ್ತು. ಅವರ ಉಗುಳು ಕೂಡ ಭೂಮಿಗೆ ಬೀಳದೆ ತಮ್ಮ ಕೊರಳಿಗೆ ಮಡಿಕೆಯನ್ನು ಕಟ್ಟಿಕೊಳ್ಳಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಮನುವಾದಿಗಳು ಪುರೋಹಿತಶಾಹಿಗಳನ್ನು ಎದುರು ಹಾಕಿಕೊಂಡುವರು ಸಾವಿತ್ರಿಬಾಯಿ ಫುಲೆ ಎಂದು ನೆನಪು ಮಾಡಿಕೊಂಡರು.

ಪತಿ ಜ್ಯೋತಿಬಾ ಫುಲೆಯವರ ಕನಸನ್ನು ನನಸು ಮಾಡಲು ಪಣತೊಟ್ಟರು. ಹಲವಾರು ಹಿಂಸೆ ಅವಮಾನವನ್ನು ಸಹಿಸಿ ಎಲ್ಲ ಹೆಣ್ಣುಮಕ್ಕಳನ್ನು ಜ್ಙಾನ ಜ್ಯೋತಿಯಿಂದ ಬೆಳೆಗಿಸಿ ಮಹಾತಾಯಿ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಯೂನಿಯನ್‌ ಅಧ್ಯಕ್ಷೆ ಜಬೀನಾಖಾನಂ, ಸದಸ್ಯರಾದ ರಾಷೀದ ಬಾನು, ಹಸೀನ ಬಾನು, ಪರ್ವಿನ್ ಬಾನು ಅರ್ಶಿಯಾ, ಸಬ್ರೀನ್, ಸಲಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT