ಗುರುವಾರ , ಆಗಸ್ಟ್ 5, 2021
29 °C

ದಾವಣಗೆರೆಯಲ್ಲಿ ಅರೆ ಅನ್‌ಲಾಕ್‌: ಸಂಚಾರ ನಡೆಸಿದ 80 ಬಸ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಾಕ್‌ಡೌನ್‌ ಸಡಿಲಿಕೆ ಮಾಡಿ ಬಸ್‌ಗಳ ಓಡಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರಿಂದ ಸೋಮವಾರ 80 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿದವು. ಸುಮಾರು ಎರಡೂವರೆ ತಿಂಗಳ ಬಳಿಕ ಬಸ್‌ಗಳು ರಸ್ತೆಗಿಳಿದವು.

ದಾವಣಗೆರೆಯಿಂದ ಮೊದಲ ಬಸ್ ಬೆಂಗಳೂರಿನ ಕಡೆ ಹೊರಟಿತು. ಚಿತ್ರದುರ್ಗ, ಶಿವಮೊಗ್ಗ, ರಾಣೆಬೆನ್ನೂರು ಸಹಿತ ಜಿಲ್ಲೆಯ ಹೊರೆಗೆ ಹಲವು ಬಸ್‌ಗಳು ಹೋದವು. ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಮುಂತಾದ ತಾಲ್ಲೂಕು ಕೇಂದ್ರಗಳಿಗೂ ಬಸ್‌ಗಳು ಸಂಚರಿಸಿದವು.

‘ಪ್ರಮುಖ ರಸ್ತೆಗಳಲ್ಲಿ ಬಸ್‌ಗಳು ಓಡಾಟ ನಡೆಸಿವೆ. ಆದರೆ ಹಳ್ಳಿಗಳಿಗೆ ಒಳರಸ್ತೆಗಳಲ್ಲಿ ಹೋಗಬೇಕಾದಲ್ಲಿಗೆ ಬಸ್‌ ಬಿಟ್ಟಿಲ್ಲ. ಪ್ರತಿ ಬಸ್‌ನಲ್ಲಿ 25 ಸೀಟ್‌ಗಳಾಗದೇ ಬಿಟ್ಟಿಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ಬಸ್‌ಗಳಿಗೆ ಜನ ಇದ್ದರು. ಆಮೇಲೆ ಜನರೇ ಇರಲಿಲ್ಲ. 2 ಗಂಟೆಯ ಬಳಿಕವೂ ಬಸ್‌ ಸಂಚಾರಕ್ಕೆ ಅವಕಾಶ ಇತ್ತು. ಪ್ರಯಾಣಿಕರು ಇಲ್ಲದ ಕಾರಣ ಬಸ್‌ಗಳ ಓಡಾಟ ನಿಲ್ಲಿಸಲಾಯಿತು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌ ಪ್ರಜಾವಾಣಿಗೆ ತಿಳಿಸಿದ್ದಾರೆ.

ಪ್ರತಿ ಬಸ್‌ನಲ್ಲಿ ಶೇ 50ಕ್ಕಿಂತ ಅಧಿಕ ಪ್ರಯಾಣಿಕರು ಹೋಗದಂತೆ ನೋಡಿಕೊಳ್ಳಲಾಗಿದೆ. ಒಂದುಸೀಟ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕೊಡಲಾಗಿದೆ. ಲಸಿಕೆ ಹಾಕಿಕೊಂಡಿರುವ ಚಾಲಕರು, ನಿರ್ವಾಹಕರನ್ನು ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು