ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ ಫ್ಯಾಸಿಸಂನ ಪ್ರಯೋಗ ಶಾಲೆ ಮಾಡಲು ಹೊರಟಿರುವ ಬಿಜೆಪಿ: ಶಫಿ ಬೆಳ್ಳಾರೆ

ಜನಾಧಿಕಾರ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಶಫಿ ಬೆಳ್ಳಾರೆ ಟೀಕೆ
Last Updated 27 ಜೂನ್ 2022, 5:24 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಜೆಪಿ ಸರ್ಕಾರ ಜನರ ನೈಜ ಸಮಸ್ಯೆಯ ಬಗ್ಗೆ ಚರ್ಚಿಸದೆ ಹಲಾಲ್, ಜಟ್ಕಾ ಕಟ್‌, ಹಿಜಾಬ್ ವಿಷಯಗಳ ಮೂಲಕ ಅರಾಜಕತೆ ಸೃಷ್ಟಿಸುತ್ತಿವೆ. ಮಸೀದಿಯೊಳಗಡೆ ಮಂದಿರ ಇದೆ ಎಂದು ನಂಬಿಸಿ, ಆ ಮೂಲಕ ಜನರನ್ನು ಕೆರಳಿಸುತ್ತಿದೆ. ಗಲಭೆ ಸೃಷ್ಟಿಸುವ ಮೂಲಕ ಹಿಂದುತ್ವದ ಫ್ಯಾಸಿಸಂನ ಪ್ರಯೋಗ ಶಾಲೆ ಮಾಡಲು ಪ್ರಯತ್ನಿಸುತ್ತಿದೆ’ ಎಂದುಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ರಾಜ್ಯ ಕಾರ್ಯದರ್ಶಿ ಶಫಿ ಬೆಳ್ಳಾರೆ ಹೇಳಿದರು.

ಇಲ್ಲಿನ ಮಿಲಾದ್ ಮೈದಾನದಲ್ಲಿ ಭಾನುವಾರ ಪಕ್ಷದ ಆಯೋಜಿಸಿದ್ದ 2ನೇ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಹಿಂದುತ್ವದ ವಿಚಾರಗಳನ್ನು ಹೇಳಿ, ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರಿಗೆ ಧರ್ಮದ ಮೇಲೆ ಪ್ರೀತಿ ಇಲ್ಲ. ನಮ್ಮನ್ನು ಒಡೆದು ಆಳುವ ಮೂಲಕ ರಾಜಕೀಯ ಅಸ್ತಿತ್ವ ಖಾತರಿ ಮಾಡಲು ಹೊರಟಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದರು.

‘ಇಂದಿನ ಗುಲಾಮತನದ ರಾಜಕಾರಣದ ಸಂಕೋಲೆಯಿಂದ ಹೊರಬಂದು ನಮ್ಮ ಕಾಲ ಮೇಲೆ ನಾವೇ ರಾಜಕಾರಣ ಮಾಡಲು ತೀರ್ಮಾನಿಸಬೇಕಾಗಿದೆ. ಪ್ರತಿಯೊಬ್ಬ ಪ್ರಜೆಗೂ ಮೂಲ ಸೌಲಭ್ಯ ಕಲ್ಪಿಸಬೇಕಾದ ರಾಜಕಾರಣ ಬೇಕಿದೆ. ಕೋಮುವಾದ ರಾಜಕಾರಣ ಪ್ರತಿರೋಧಿಸಲು ಎಲ್ಲಾ ರೀತಿಯ ಧೈರ್ಯ ಸ್ಥೈರ್ಯ, ಕಾರ್ಯಕರ್ತರ ಪಡೆ ಹೊಂದಿರುವ ಪಕ್ಷ ಎಸ್‌ಡಿಪಿಐ’ ಎಂದರು.

ಜಾತ್ಯತೀತ ಪಕ್ಷಗಳು ಮೌನ: ‘ಎಸ್‌ಡಿಪಿಐ ಶ್ರಮವಹಿಸಿ ಕಳೆದ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳನ್ನು ಗೆಲ್ಲಿಸಿತು. ಆದರೆ ಗೆದ್ದ ಅಭ್ಯರ್ಥಿಗಳು ಬಿಜೆಪಿಗೆ ಮಾರಾಟವಾಗಿದ್ದಾರೆ. ಬಿಜೆಪಿಗೆ ರಾಜ್ಯದ ಜನರು ಬಹುಮತ ನೀಡಲಿಲ್ಲ. ಬದಲಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಶಾಸಕರನ್ನು ಬಿಜೆಪಿಗೆ ಕಳುಹಿಸಿದರು. ಮುಂದಿನ ಸಂದರ್ಭಗಳಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿ ಗೆಲ್ಲುವ ವಾತಾವರಣ ಇದೆ’ ಎಂದು ಸಂಶಯ ವ್ಯಕ್ತಪಡಿಸಿದರು.

‘ಯಾರೇ ಅಧಿಕಾರ ನಡೆಸಲಿ ಆ ದೇಶವಾಸಿಗಳಿಗೆ ಭದ್ರತೆ ಕೊಡುವ ಕೆಲಸವನ್ನು ಮೊದಲು ಮಾಡಬೇಕು. ರಕ್ಷಣೆ ನೀಡದಿದ್ದರೆ, ಜನರ ಜೀವಕ್ಕೆ ಬೆಲೆ ಎಲ್ಲಿದೆ’ ಎಂದುಹಿರಿಯೂರಿನಆದಿಜಾಂಬವಮಠದಷಡಕ್ಷರಿಮುನಿ ಸ್ವಾಮೀಜಿಪ್ರಶ್ನಿಸಿದರು.

‘ಯಾವ ಧರ್ಮವೂ ದ್ವೇಷವನ್ನು ಹೇಳುವುದಿಲ್ಲ. ಬದಲಾಗಿ ಉತ್ತಮ ಅಂಶಗಳನ್ನು ಹೇಳುತ್ತವೆ. ಕೆಲವರು ಸ್ವಂತ ವಿಚಾರಧಾರೆಗಳಿಗೆ ಧರ್ಮದ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ. ಅದರಂತಹ ಕ್ಷುಲ್ಲಕತನ ಬೇರೊಂದಿಲ್ಲ. ಧರ್ಮದ ಆಧಾರದ ಮೇಲೆ ಆಡಳಿತ ನಡೆಸಬಾರದು. ಬದಲಾಗಿ ಸಂವಿಧಾನ ತತ್ವದ ಮೇಲೆ ಆಡಳಿತ ನಡೆಸಬೇಕು. ಆದರೆ ಈಗ ಸಂವಿಧಾನ ಬದಲಿಸುವುದಾಗಿ ಹೇಳುತ್ತಿದ್ದಾರೆ’ ಎಂದು ಹೇಳಿದರು.

ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷೆ ಪ್ರೊ.ಸೈಯೀದಾ ಸಾದಿಯಾ, ‘ಕರ್ನಾಟಕ ಹಿಜಾಬ್, ಹಲಾಲ್, ಭ್ರಷ್ಟಾಚಾರದಲ್ಲಿ ಮಾದರಿ ರಾಜ್ಯವಾಗಿದೆ. ಹಿಂದೆ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿದರು. ಆದರೆ ಈಗ ನಮ್ಮೊಳಗಿನ ಶತ್ರುಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ’ ಎಂದು ಹೇಳಿದರು.

ಬಿ.ಆರ್. ಭಾಸ್ಕರ್ ಪ್ರಸಾದ್, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯರಾದ ಸಲೀಂಖಾನ್ ಶಿವಮೊಗ್ಗ, ಪ್ರೊ.ಗಯಾಸುದ್ದೀನ್, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಇಸ್ಮಾಯಿಲ್ ಜಬೀಉಲ್ಲಾ, ಶಬಾನಾ ಬಾನು, ಮುಖಂಡರಾದ ಟಿಪ್ಪು ಖಾಜಿಖಾನ್, ಆದಿಲ್‌ಖಾನ್, ಇಮ್ರಾನ್, ನೂರ್ ಅಹಮದ್, ರಿಯಾಜುದ್ದೀನ್, ಬಾಳೆಕಾಯಿ ಶ್ರೀನಿವಾಸ್ ಇದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT