ಶಾಮನೂರು ಕುಟುಂಬದ ಹೆಸರು ಚಿರಸ್ಥಾಯಿ: ಮುನಿಯಪ್ಪ

ದಾವಣಗೆರೆ: ಸಮರ್ಪಕವಾಗಿ ಕೋವಿಡ್ ನಿರೋಧಕ ಲಸಿಕೆ ನೀಡಲು ಸರ್ಕಾರಗಳು ವಿಫಲವಾಗಿವೆ. ಇಂಥ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು ಸ್ವಂತ ಹಣದಲ್ಲಿ ಲಸಿಕೆ ನೀಡುತ್ತಿರುವ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಕುಟುಂಬದ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಶ್ಲಾಘಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆಯ ಹೊಲ್‍ಸೆಲ್ ತರಕಾರಿ ವ್ಯಾಪಾರಸ್ಥರಿಗೆ ಏರ್ಪಡಿಸಿದ್ದ ಉಚಿತ ಲಸಿಕಾ ಶಿಬಿರದಲ್ಲಿ ಬುಧವಾರ ಅವರು ಮಾತನಾಡಿದರು.
ಒಂದು ಸರ್ಕಾರ ನಡೆಸಬೇಕಾದ ಕಾರ್ಯಕ್ರಮವನ್ನು ಒಬ್ಬ ವ್ಯಕ್ತಿ ಮಾಡುತ್ತಾರೆ ಎಂದಾದರೆ ಅವರು ವ್ಯಕ್ತಿಯಲ್ಲ ಶಕ್ತಿ. ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ವಾರಕ್ಕೊಮ್ಮೆಯೂ ಲಸಿಕೆ ಪೂರೈಸುತ್ತಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕೆಪಿಸಿಸಿ ಕಾರ್ಯದರ್ಶಿ ಗುರಪ್ಪ ನಾಯ್ಡು, ಮುಖಂಡರಾದ ಅಮೃತೇಶ್, ಕೆ.ಎಸ್. ಬಸವಂತಪ್ಪ, ಅಯೂಬ್ ಪೈಲ್ವಾನ್, ಜಿ.ಎಸ್.ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ದೊಗ್ಗಳ್ಳಿ ಬಸವರಾಜ್, ಎಸ್.ಎನ್.ಚಂದ್ರಪ್ಪ, ಎಸ್.ಎನ್. ತಿಪ್ಪೇಸ್ವಾಮಿ, ಆರ್. ವಾಸುದೇವ್, ಕೆ. ನೀಲಪ್ಪ, ಡಿಟಿಎನ್ ನಾರಾಯಣಪ್ಪ, ಎ.ಆರ್. ರಾಮಚಂದ್ರಪ್ಪ, ಎಂ.ಎನ್. ಮಹಾದೇವಣ್ಣ, ಮಲ್ಲೇಶ್, ರಾಕೇಶ್, ಮಾರುತಿ, ಆನಂದ ಅವರೂ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.