ಮಂಗಳವಾರ, ಸೆಪ್ಟೆಂಬರ್ 21, 2021
21 °C

‘ಉಪ್ಪು ತಿಂದವರು ನೀರು ಕುಡಿಯಲೇಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಉಪ್ಪು ತಿಂದವರು ನೀರು ಕುಡಿಯಲೇಬೇಕು. ಡ್ರಗ್ಸ್‌ ಮಾಫಿಯದಲ್ಲಿ ತೊಡಗಿಕೊಂಡವರು ಶಿಕ್ಷೆ ಅನುಭವಿಸುತ್ತಾರೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮಂಗಳವಾರ ಹೇಳಿದರು.

ಸುದ್ದಿಗಾರರ ಜತೆಗೆ ಮಾತನಾಡುತ್ತಾ, ‘ಕ್ಯಾಸಿನೊದಲ್ಲಿ ಡ್ರಗ್ಸ್ ಇರಲ್ಲ. ಜೂಜು ಇರುತ್ತದೆ. ಅಲ್ಲಿಗೆ ಹೋಗೋದು ಅಪರಾಧವಲ್ಲ. ಮಹಿಳೆಯರ ಜತೆಗೆ ಡ್ಯಾನ್ಸ್‌ ಮಾಡಿದ್ರೆ, ಡ್ರಗ್ಸ್‌ ತಗೊಂಡಂತೆ ಅಲ್ಲ. ಡ್ರಗ್ಸ್‌ ಮಾರೋದು ಅಪರಾಧ’ ಎಂದು ವಿವರಿಸಿದರು.

‘ಕೆಲವರ ಹೆಸರು ಕೆಡಿಸಲು ಅವರ ವಿರೋಧಿಗಳು ಹೆಸರು ಹೇಳುತ್ತಾರೆ. ನಿಜವಾಗಿ ಈ ಚಟುವಟಿಕೆಯಲ್ಲಿ  ತೊಡಗಿಸಿಕೊಂಡವರಿಗೆ ಶಿಕ್ಷೆಯಾಗಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.