ಭಾನುವಾರ, ಅಕ್ಟೋಬರ್ 24, 2021
20 °C

ಹುತಾತ್ಮ ರೈತರಿಗೆ ಶ್ರದ್ದಾಂಜಲಿ: ಅಪರಾಧಿಗಳಿಗೆ ಶಿಕ್ಷೆ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಮಾರಣಹೋಮ ಖಂಡಿಸಿ ಇಲ್ಲಿನ ಜಯದೇವ ಸರ್ಕಲ್‌ನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕದಿಂದ ಮೇಣದ ಬತ್ತಿ ಹಚ್ಚಿ ಪ್ರತಿಭಟಿಸುವ ಮೂಲಕ ಹುತಾತ್ಮ ರೈತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಸಮಿತಿಯ ಜಿಲ್ಲಾ ಸಂಚಾಲಕ ಆವರಗೆರೆ ಎಚ್.ಜಿ. ಉಮೆಶ್, ‘ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹಾಯಿಸಿ ಹತ್ಯೆಗೈದ ಅಪರಾಧಿಗಳನ್ನು ಬಂಧಿಸಿ, ಕೊಲೆ ಪ್ರಕರಣದಲ್ಲಿ ಬರುವ ಐಪಿಸಿ ಅಡಿಯಲ್ಲಿ ಉಗ್ರ ಶಿಕ್ಷೆ ಕೊಡಿಸಬೇಕು. ಮೃತರಾದ ರೈತರ ತಲಾ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಸರ್ಕಾರಿ ನೌಕರಿಯನ್ನು ಮೃತರ ಅವಲಂಬಿತ ಕುಟುಂಬಗಳಿಗೆ ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರದ ಸಚಿವ ಅಜಯ್ ಮಿಶ್ರಾ ಈ ಕೂಡಲೇ ರಾಜೀನಾಮೆ ನೀಡಬೇಕು. ರೈತರನ್ನು ವಿನಾಕಾರಣ ಕೊಲೆ ಮಾಡುತ್ತಿರುವ ಬಿಜೆಪಿ ಸರ್ಕಾರ ತೊಲಗಬೇಕು ಎಂದು ಒತ್ತಾಯಿಸಿದರು.

ಖುಷಿಗಾಗಿ ಗಾಳಿಯಲ್ಲಿ ಗುಂಡು ಹಾರಿಸುವ ರಾಜ್ಯದ ಕೇಂದ್ರ ಸಚಿವರಿಗೆ ಬಿಜೆಪಿ, ಸಂಘ ಪರಿವಾರ ಬುದ್ಧಿ ಹೇಳಬೇಕು. ಜತೆಗೆ ಸಂಘಪರಿವಾರ, ಬಿಜೆಪಿ ಕೂಡಾ ಅನಾಗರಿಕ ಸಂಸ್ಕೃತಿಯಿಂದ ಹೊರಬರಬೇಕು ಎಂದು ಸಲಹೆ ನೀಡಿದರು.

ಮಧು ತೊಗಲೇರಿ, ಶ್ರೀನಿವಾಸ್, ದೇವರಾಜ್, ರಂಗಪ್ಪ, ಭಾರತಿ, ಐರಣಿ ಚಂದ್ರು, ಮಹಮ್ಮದ್ ಜಿಕ್ರಿಯಾ, ಆದಿಲ್‍ಖಾನ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು