ಮಂಗಳವಾರ, ಸೆಪ್ಟೆಂಬರ್ 21, 2021
28 °C

ದಾವಣಗೆರೆ: ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್ ಬಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೆಎಆರ್‌ಟಿಸಿ ದಾವಣಗೆರೆ ವಿಭಾಗದಿಂದ ಚಿತ್ರದುರ್ಗ, ಹಂಪಿ ಸಹಿತ ವಿವಿಧೆಡೆ ವಿಶೇಷ ಪ್ಯಾಕೇಜ್‌ ಬಸ್‌ಗಳನ್ನು ಕಲ್ಪಿಸಲು ನಿರ್ಧರಿಸಿದೆ.

ದಾವಣಗೆರೆಯಿಂದ ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ಹೊರಡುವ ಬಸ್ ಚಿತ್ರದುರ್ಗದ ಕೋಟೆ, ಮುರುಘಾಮಠ, ಚಂದ್ರವಳ್ಳಿ ಹಾಗೂ ಹಿರಿಯೂರು ಸಮೀಪದ ವಾಣಿವಿಲಾಸ ಸಾಗರ ಜಲಾಶಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 8ಕ್ಕೆ ಹಿಂದಿರುಗಲಿದೆ. ಪ್ರಯಾಣ ದರ ₹ 350 ನಿಗದಿಪಡಿಸಲಾಗಿದೆ.

ದಾವಣಗೆರೆಯಿಂದ ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ಹೊರಡುವ ಬಸ್ ಹೊಸಪೇಟೆ, ಹಂಪಿ, ಕಮಲಾಪುರ, ಹುಲಿಗಿ ದೇವಸ್ಥಾನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 9ಕ್ಕೆ ಹಿಂದಿರುಗಲಿದೆ. ಪ್ರಯಾಣ ದರ
₹ 500 ನಿಗದಿಪಡಿಸಲಾಗಿದೆ.

ದಾವಣಗೆರೆ, ಹರಿಹರದಿಂದ ಆಗಸ್ಟ್ 1ರಿಂದ ನಿತ್ಯ ಬೆಳಿಗ್ಗೆ 7ಕ್ಕೆ ಹೊರಡುವ ಬಸ್ ಶಿರಸಿಯ ಮಾರಿಕಾಂಬ ದೇವಸ್ಥಾನ, ಜೋಗಫಾಲ್ಸ್ ವೀಕ್ಷಣೆ ಮುಗಿಸಿ ರಾತ್ರಿ 8ಕ್ಕೆ ಹಿಂತಿರುಗಲಿದೆ. ₹ 500 ಪ್ರಯಾಣ ದರ ನಿಗದಿಪಡಿಸಲಾಗಿದೆ.

ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಹಾಗೂ ಆನ್‍ಲೈನ್ www.ksrtc.in ಮೂಲಕವೂ ಮುಂಗಡ ಸೀಟು ಕಾಯ್ದಿರಿಸಬಹುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.