ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣವೆಗೆ ಬೆಂಕಿ: ಅಪಾರ ಮೇವು ಭಸ್ಮ

Last Updated 19 ಮಾರ್ಚ್ 2021, 5:08 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಮರಬನಹಳ್ಳಿಯಲ್ಲಿ ಆರು ಜನ ರೈತರಿಗೆ ಸೇರಿದ ಭತ್ತದ ಹುಲ್ಲಿನ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅಪಾರ ಪ್ರಮಾಣದ ಮೇವು ಸುಟ್ಟಿದೆ.

ಕಿಡಿಗೇಡಿಗಳು ಮಾರ್ಚ್‌ 15, 16 ಮತ್ತು 17ರಂದು ಮೂರು ದಿನಗಳು ರಾತ್ರಿ ಸಮಯದಲ್ಲಿ ಪ್ರತಿದಿನ ಇಬ್ಬರು ರೈತರ ಬಣವೆಗಳಿಗೆ ಬೆಂಕಿ ಹಚ್ಚಿದ್ದಾರೆ. ಶಂಭುಲಿಂಗಯ್ಯ, ಉಮಾಪತಿ, ಕೆ. ಬಿ. ಬಸವರಾಜಪ್ಪ, ಪಿ.ಬಸವರಾಜಪ್ಪ,ಎಚ್‌.ಎಸ್‌. ಹನುಮಂತಪ್ಪ ಮತ್ತು ಎಂ.ಜಿ. ಯೋಗೇಂದ್ರಪ್ಪ ಅವರಿಗೆ ಸೇರಿದ ಬಣವೆಗಳು ಸುಟ್ಟು ಭಸ್ಮವಾಗಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್‌.ಎಸ್‌. ಹನುಮಂತಪ್ಪ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಮೇವು ಕಳೆದುಕೊಂಡ ರೈತರಿಗೆ ಸಾಂತ್ವನ ಹೇಳಿ, ಕಿಡಿಗೇಡಿಗಳನ್ನುಬಂಧಿಸಬೇಕು ಎಂದು ಒತ್ತಾಯಿಸಿದರು.

20 ಟ್ರ್ಯಾಕ್ಟರ್‌ ಲೋಡ್‌ ಹುಲ್ಲು ಭಸ್ಮವಾಗಿದ್ದು, ಅಪಾರ ನಷ್ಟವಾಗಿದೆ. ಈಗ ಹಣ ಕೊಟ್ಟರೂ ಮೇವು ಸಿಗುತ್ತಿಲ್ಲ. ಪೊಲೀಸರು ಇದಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಆರ್‌.ಐ. ವೇದಮೂರ್ತಿ, ವಿ.ಎ. ಕುಮಾರನಾಯ್ಕ್‌, ಪಿ.ಡಿ.ಒ. ಆನಂದನಾಯ್ಕ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT