ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ | ಬಿಡಾಡಿ ದನಗಳು ಗೋಶಾಲೆಗೆ: ನಗರಸಭೆ ಎಚ್ಚರಿಕೆ

Published 30 ಆಗಸ್ಟ್ 2024, 16:19 IST
Last Updated 30 ಆಗಸ್ಟ್ 2024, 16:19 IST
ಅಕ್ಷರ ಗಾತ್ರ

ಹರಿಹರ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದೆ ಎಂಬ ದೂರುಗಳು ಬರುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ದನಕರುಗಳನ್ನು ಗೋಶಾಲೆಗೆ ಕಳಿಸಲಾಗುವುದು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲವರು ತಮಗೆ ಸೇರಿದ ಜಾನುವಾರುಗಳನ್ನು ಸಾಕಣೆ ಮಾಡದೇ ಬೀದಿಗಳಲ್ಲಿ ಬಿಟ್ಟಿರುವುದು ಕಂಡುಬರುತ್ತಿದೆ. ಶಿವಮೊಗ್ಗ ರಸ್ತೆ, ಪಿ.ಬಿ ರಸ್ತೆ, ಹರಪನಹಳ್ಳಿ ರಸ್ತೆ, ದೊಡ್ಡಿ ಬೀದಿ ತರಕಾರಿ ಮಾರುಕಟ್ಟೆ, ಹೋಲ್‌ಸೇಲ್ ತರಕಾರಿ ಮಾರುಕಟ್ಟೆ, ಎ.ಕೆ.ಕಾಲೊನಿ, ಲೇಬರ್ ಕಾಲೊನಿ, ವಿಜಯನಗರ, ಕೆ.ಆರ್.ನಗರ ಮುಂತಾದೆಡೆ ಬಿಡಾಡಿ ದನಗಳಿಂದ ಜನ-ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಇದರಿಂದ ವಾಹನಗಳ ಅಪಘಾತಗಳು ಸಂಭವಿಸುತ್ತಿವೆ. ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅಡ್ಡಿವುಂಟಾಗಿರುತ್ತದೆ. ಸಾರ್ವಜನಿಕರು ದನ, ಕರು, ಹಸುಗಳನ್ನು ತಮ್ಮದೇ ಸ್ಥಳದಲ್ಲಿ ಆರೈಕೆ ಮಾಡಬೇಕು. ರಸ್ತೆ, ಬೀದಿ, ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಜಾನುವಾರುಗಳನ್ನು ಪೊಲೀಸರ ನೆರವಿನಿಂದ ದೂರದ ಗೋಶಾಲೆಗಳಿಗೆ ಸಾಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT