ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲ ಪೀಠಕ್ಕೆ ಹಿರೇಕಲ್ಮಠ ಸ್ವಾಮೀಜಿ ಪಾದಯಾತ್ರೆ

Last Updated 10 ಮಾರ್ಚ್ 2020, 14:30 IST
ಅಕ್ಷರ ಗಾತ್ರ

ಹೊನ್ನಾಳಿ: ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರೀಶೈಲ ಪೀಠಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಂಗಳವಾರ ಮುಂಜಾನೆ ಶ್ರೀಶೈಲ ಪೀಠಕ್ಕೆ ಬೀಳ್ಕೊಟ್ಟ ಸಂದರ್ಭಧಲ್ಲಿ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಹಿಂದಿನ ಶ್ರೀ ಅವರ ಪುಣ್ಯಸ್ಮರಣೆ ನಂತರ ಶ್ರೀಶೈಲಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, ಇದು 3ನೇ ವರ್ಷದ ಪಾದಯಾತ್ರೆಯಾಗಿದೆ ಎಂದರು.

ಹಿರೇಕಲ್ಮಠದ ಕರ್ತೃ ಗದ್ದುಗೆಯಿಂದದ ಪಾದಯಾತ್ರೆ ಪ್ರಾರಂಭವಾಗಿ ಮಲೇಬೆನ್ನೂರು, ದೇವರಬೆಳಕೆರೆ, ದಾವಣಗೆರೆ, ತಾರಹಳ್ಳಿ, ಉಜ್ಜಯಿನಿ, ಕೂಡ್ಲಿಗಿ, ಗುಡೇಕೋಟೆ, ರಾಂಪುರ, ಬಳ್ಳಾರಿ ಮೂಲಕ ಆಂಧ್ರಪ್ರದೇಶ ಪ್ರವೇಶಿಸಿ ಕರ್ನೂಲು ನಂತರ ಅರಣ್ಯ ಪ್ರದೇಶಗಳಲ್ಲಿ ಸಾಗಿ ಕೈಲಾಸಗಿರಿ ಮೂಲಕ ಶ್ರೀಶೈಲಕ್ಕೆ ತಲುಪುತ್ತೇವೆ. ಒಂದು ದಿನಕ್ಕೆ ಕನಿಷ್ಠ 35ರಿಂದ 40 ಕಿ.ಮೀ. ನಡೆಯುತ್ತೇವೆ ಎಂದು ಮಾಹಿತಿ ನೀಡಿದರು.

ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಎಚ್.ಆರ್. ಬಸವರಾಜಪ್ಪ, ಪ್ರಶಾಂತ್, ಪಟ್ಟಣ ಪಂಚಾಯಿತಿ ಸದಸ್ಯ ಸುರೇಶ್‍ ಹೊಸಕೇರಿ, ಬಸಯ್ಯಶಾಸ್ತ್ರಿ ಸೇರಿ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT