ಭಾನುವಾರ, ಸೆಪ್ಟೆಂಬರ್ 19, 2021
30 °C

ಟ್ಯಾಂಕರ್‌ ಡಿಕ್ಕಿ: ಬೈಕ್‌ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬಾಡ ಕ್ರಾಸ್‌ ಗಣೇಶ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೈಕ್‌ಗೆ ಟ್ಯಾಂಕರ್‌ ಲಾರಿ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಇಂಡಿಯನ್‌ ಪೆಟ್ರೋಲ್‌ ಬಂಕ್‌ ಬಳಿ ನಿವಾಸಿ, ಶಾಲಾ ಮುಖ್ಯಸ್ಥ ಡೆಫ್ಟಿನಾಲ್‌ ಮೈಕಲ್‌ ಜಸ್ಟೀಸ್‌ (25) ಮೃತಪಟ್ಟವರು. ಅವರು ಮತ್ತು ಅವರ ಸಹೋದರ ಕ್ರಿಸ್ಟೋಫರ್‌ ಅವರು ಕಂಪ್ಯೂಟರ್‌ ಸರ್ವೆ ಕೆಲಸಕ್ಕಾಗಿ ಶನಿವಾರ ದಾವಣಗೆರೆಗೆ ಬಂದು ರಾತ್ರಿ ವಾಪಸ್‌ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿನಿಂದ ಬಂದ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಬೈಕಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಡೆಫ್ಟಿನಾಲ್‌ ಮೈಕಲ್‌ ಜಸ್ಟೀಸ್‌ ಮೃತಪಟ್ಟಿದ್ದಾರೆ. ಕ್ರಿಸ್ಟೋಫರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ಯಾಂಕರ್‌ ಚಾಲಕ ತಮಿಳುನಾಡಿನ ಆರ್ಮುಗಂ (35) ಮೇಲೆ ದಾವಣಗೆರೆ ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು