ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದರಸಾಗಳಲ್ಲಿ ದೇಶದ್ರೋಹದ ಪಾಠ: ಸಾಬೀತುಪಡಿಸಿ’

ಮುಸ್ಲಿಮರ ವಿರುದ್ಧ ರೇಣುಕಾಚಾರ್ಯ ಹೇಳಿಕೆ ಸರಿಯಲ್ಲ: ಚೀಲೂರು ವಾಜೀದ್
Last Updated 31 ಮಾರ್ಚ್ 2022, 4:00 IST
ಅಕ್ಷರ ಗಾತ್ರ

ಹೊನ್ನಾಳಿ: ‘ಮಸೀದಿ, ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡಲಾಗುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದು ಖಂಡನೀಯ. ಅವರು ಇದನ್ನು ಸಾಬೀತುಪಡಿಸಲಿ’ಎಂದು ತಾಲ್ಲೂಕು ಅಲ್ಪಸಂಖ್ಯಾತ ಸಮಾಜದ ಮುಖಂಡ ಚೀಲೂರು ವಾಜೀದ್ ಸವಾಲು ಹಾಕಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು, ‘ಇಂತಹ ಆರೋಪ ಮಾಡುವುದಕ್ಕೂ ಮೊದಲು ಸರಿಯಾದ ಮಾಹಿತಿ ಪಡೆದು ನಂತರ ಹೇಳಬೇಕು.ಭಾರತದಿಂದ ಪಾಕಿಸ್ತಾನ ವಿಭಜನೆ ಆದಾಗ, ನಾವು ಭಾರತವನ್ನು ಒಪ್ಪಿಕೊಂಡು ಇಲ್ಲಿಯೇ ಉಳಿದೆವು. ಅಂದಿನಿಂದ ನಾವು ದೇಶದ ಭಾಗವಾಗಿಯೇ ಇದ್ದೇವೆ. ದೇಶಕ್ಕಾಗಿ ಪ್ರಾಣವನ್ನು ಕೊಡಲು ಸಿದ್ಧರಿದ್ದೇವೆ. ಆದರೆ ಶಾಸಕ ರೇಣುಕಾಚಾರ್ಯ ಮುಸ್ಲಿಮರ ವಿರುದ್ಧ ಪದೇಪದೇ ಹೇಳಿಕೆ ಕೊಡುವ ಮೂಲಕ ನಮಗೆ ನೋವುಂಟು ಮಾಡುತ್ತಿದ್ದಾರೆ’ ಎಂದು ದೂರಿದರು.

‘ರೇಣುಕಾಚಾರ್ಯ ಅವರು ಶಾಸಕರಾಗುವುದಕ್ಕೂ ಮುನ್ನ ನಮ್ಮ ಬೀದಿಗಳಿಗೆ ಬಂದು ಕೈಮುಗಿದು ಮತ ಕೇಳುತ್ತಾರೆ. ಗೆದ್ದು ಶಾಸಕರಾದ ಮೇಲೆ ನಮ್ಮ ಸಮುದಾಯ ವಿರೋಧಿಸಿ ಹೇಳಿಕೆ ನೀಡುತ್ತಾರೆ.ಧರ್ಮಗಳ ಬಗ್ಗೆ ಬೋಧನೆ ಮಾಡುವ ನಮ್ಮ ಮದರಸಾಗಳ ಬಗ್ಗೆ ಇವರಿಗೆ ತಪ್ಪು ಕಲ್ಪನೆ ಇದೆ. ಹಿಂದೆ ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೆವು. ಈಗ ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಾಮರಸ್ಯವನ್ನು ಹಾಳು ಮಾಡುವುದು ಬೇಡ’ ಎಂದರು.

‘ನಾವು ಭಾರತೀಯ ಮುಸ್ಲಿಮರು, ಸಂವಿಧಾನಕ್ಕೆ ತಲೆಬಾಗುತ್ತೇವೆ.ಶೇ 99ರಷ್ಟು ಜನ ಹಿಜಾಬ್‌ ಕುರಿತ ಕೋರ್ಟ್ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಒಂದಿಬ್ಬರು ಮಾತ್ರ ವಿರೋಧಿಸುತ್ತಿದ್ದಾರೆ.ಇಂಥವರು ಎಲ್ಲಾ ಕಡೆಗಳಲ್ಲಿಯೂ ಇರುತ್ತಾರೆ. ಈ ಬಗ್ಗೆ ವಿವಾದ ಸೃಷ್ಟಿಸುವುದು ಬೇಡ’ ಎಂದರು.

ಎಚ್. ನಜೀರುಲ್ಲಾ, ಬಾಷಾ, ಉಬೇದುಲ್ಲಾ, ರೋಷನ್ ಬೇಗ್, ಸಾಸ್ವೇಹಳ್ಳಿ ಸುಲೇಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT