ಬುಧವಾರ, ಸೆಪ್ಟೆಂಬರ್ 22, 2021
27 °C
₹ 8.16 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಕಳ್ಳರು

ದಾವಣಗೆರೆ: ಬಿಎಸ್‌ಎನ್‌ಎಲ್ ನಿವೃತ್ತ ನೌಕರನ ಮನೆಯಲ್ಲಿ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ಸರಸ್ವತಿ ನಗರ ’ಎ‘ ಬ್ಲಾಕ್‌ನಲ್ಲಿ ಬಿ.ಎಸ್‌.ಎನ್.ಎಲ್‌ ನಿವೃತ್ತ ನೌಕರನ ಮನೆಯ ಬೀಗ ಮುರಿದ ಕಳ್ಳರು ₹ 8.16 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ₹ 15 ಸಾವಿರವನ್ನು ಕಳ್ಳತನ ಮಾಡಿದ್ದಾರೆ.

ಎಚ್. ಗಂಗಾಧರ ಚಾರಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಗಂಗಾಧರ ಚಾರಿ ಅವರು ಅತ್ತೆಯ ಪುಣ್ಯತಿಥಿಯ ಕಾರ್ಯಕ್ಕೆ ಅಣಬೇರು ಗ್ರಾಮಕ್ಕೆ ತೆರಳಿದ ವೇಳೆ ಕಳ್ಳತನ ನಡೆದಿದೆ.

ಕಬ್ಬಿಣದ ಆಯುಧದಿಂದ ಮನೆಯ ಬಾಗಿಲ ಬೀಗ ಮುರಿದ ಕಳ್ಳರು ಬೀರುವಿನ ಲಾಕರ್ ತೆಗೆದು ಒಂದು ಕೆಂಪು ಹವಳದ ಬಂಗಾರದ ಸರ, 40 ಗ್ರಾಂ ತೂಕದ ಬಂಗಾರದ ಬಳೆ, 30 ಗ್ರಾಂ ತೂಕದ ಬಂಗಾರದ ನೆಕ್ಲೆಸ್, 20 ಗ್ರಾಂ ತೂಕದ ಬಂಗಾರದ ಬ್ರಾಸ್‌ಲೆಟ್, 10 ಗ್ರಾಂ ತೂಕದ ಬಂಗಾರದ ನೀಲಿ ಹರಳಿನ ಉಂಗುರ, 10 ಗ್ರಾಂ ತೂಕದ ಒಂದು ಬಂಗಾರದ ಉಂಗುರ, ಎರಡು ಮಕ್ಕಳ ಉಂಗುರ, ಬಂಗಾರದ ಕಿವಿಯೋಲೆ, 540 ಗ್ರಾಂ ಬೆಳ್ಳಿಯ ಆಭರಣಗಳನ್ನು ಕದ್ದೋಯ್ದಿದ್ದಾರೆ.

ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು