ಶನಿವಾರ, ಏಪ್ರಿಲ್ 4, 2020
19 °C

ಟ್ರ್ಯಾಕ್ಟರ್‌ ಡಿಕ್ಕಿ: ಬೈಕ್‌ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಾಯಕೊಂಡ ಪೊಲೀಸ್‌ ಠಾಣೆ ವ್ಯಾಪ್ತಿಯ ಸಾಸಲು–ಆನಗೋಡು ರಸ್ತೆಯಲ್ಲಿ ಪರಶುರಾಂಪುರ ಕ್ರಾಸ್‌ ಬಳಿ ಭಾನುವಾರ ರಾತ್ರಿ ಬೈಕ್‌ಗೆ ಟ್ರ್ಯಾಕ್ಟರ್‌ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಇಲ್ಲಿನ ಎಚ್‌ಕೆಆರ್‌ ನಗರದ ಸಾದಿಕ್‌ ಉಲ್ಲಾ (30) ಮೃತಪಟ್ಟವರು. ತಾಳ್ಯ ಗ್ರಾಮದಿಂದ ಸಾದಿಕ್‌ ಉಲ್ಲಾ ತನ್ನ ಬೈಕಲ್ಲಿ ಬಂಬೂ ಬಜಾರ್‌ನ ಅಂಜಿನಪ್ಪ ಅವರನ್ನು ಕೂರಿಸಿಕೊಂಡು ಬರುತ್ತಿದ್ದರು. ಪರಶುರಾಂಪುರ ಕ್ರಾಸ್‌ ಬಳಿ ಹಿಂದಿನಿಂದ ಬಂದ ಟ್ರ್ಯಾಕ್ಟರ್‌ ಓವರ್‌ಟೇಕ್‌ ಮಾಡಿ ಯಾವುದೇ ಸೂಚನೆ ನೀಡದೆ ಎಡಕ್ಕೆ ತಿರುಗಿದೆ. ಆಗ ಟ್ರ್ಯಾಕ್ಟರ್‌ನ ಟ್ರ್ಯಾಲಿ ಬೈಕ್‌ಗೆ ತಾಗಿದೆ. ಬೈಕ್‌ ರಸ್ತೆಗೆ ಬಿದ್ದು ಸಾದಿಕ್‌ ಉಲ್ಲಾ ಮೃತಪಟ್ಟಿದ್ದಾರೆ. ಅಂಜಿನಪ್ಪ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ ನಂಬರ್‌, ಚಾಲಕ ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)