ದಾವಣಗೆರೆ: ವಾಹನಗಳ ಮಾಲೀಕರು ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಪ್ರಕರಣಗಳ ಇತ್ಯರ್ಥಕ್ಕಾಗಿ ಸಾರಿಗೆ ಇಲಾಖೆ ಈಚೆಗೆ ಪ್ರಕಟಿಸಿದ್ದ ಶೇ 50ರಷ್ಟು ರಿಯಾಯಿತಿಯಡಿ ದಂಡ ಪಾವತಿ ಅಭಿಯಾನಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನ.21ರಿಂದ ಡಿ.12ರವರೆಗೆ ರಿಯಾಯಿತಿ ಅವಕಾಶ ಬಳಸಿಕೊಂಡು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿತ್ತು. ಮಾಲೀಕರು, ತಮ್ಮ ವಾಹನಕ್ಕೆ ವಿಧಿಸಿರುವ ದಂಡದ ಮೊತ್ತದ ಅರ್ಧದಷ್ಟನ್ನು ಪಾವತಿಸಲು ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿತ್ತು. ಪ್ರಾದೇಶಿಕ ಸಾರಿಗೆ (ಆರ್ಟಿಒ) ಶಿವಮೊಗ್ಗ ವಿಭಾಗದಲ್ಲಿ ಬಾಕಿ ಇದ್ದ ಇಂತಹ 7,538 ಪ್ರಕರಣಗಳ ಪೈಕಿ, 123 ಪ್ರಕರಣಗಳು (ಶೇ 1.63) ಮಾತ್ರ ಇತ್ಯರ್ಥವಾಗಿವೆ. ₹2.73 ಲಕ್ಷ ದಂಡ ವಸೂಲಾಗಿದೆ.

1991ರಿಂದ 2020ರ ಅವಧಿಯೊಳಗೆ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ದಾಖಲಿಸಿದ್ದ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರ ರಿಯಾಯಿತಿ ಘೋಷಿಸಲಾಗಿತ್ತು. ಶಿವಮೊಗ್ಗ ವಿಭಾಗ ವ್ಯಾಪ್ತಿಯ ಶಿವಮೊಗ್ಗ, ಸಾಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಗಳೂರು, ಬಂಟ್ವಾಳ, ಉಡುಪಿ, ತಲಪಾಡಿ ಚೆಕ್ಪೋಸ್ಟ್ ಹಾಗೂ ಪುತ್ತೂರು ಉಪ ವಿಭಾಗಗಳಲ್ಲಿ ಇದಕ್ಕೆ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿಲ್ಲ.

ಈ ಪೈಕಿ ಶಿವಮೊಗ್ಗ ಉಪ ವಿಭಾಗದಲ್ಲಿ ಅತಿಹೆಚ್ಚು ಅಂದರೆ, 25 ಪ್ರಕರಣಗಳು ಇತ್ಯರ್ಥವಾಗಿವೆ. ಇನ್ನುಳಿದಂತೆ ಸಾಗರ ಉಪವಿಭಾಗ 21, ಚಿತ್ರದುರ್ಗ 17, ಮಂಗಳೂರು 13, ಪುತ್ತೂರು 14, ಉಡುಪಿ 13, ಬಂಟ್ವಾಳ 9, ಚಿಕ್ಕಮಗಳೂರು 5, ತಲಪಾಡಿ ಚೆಕ್ಪೋಸ್ಟ್ 4, ದಾವಣಗೆರೆ ಉಪವಿಭಾಗದಲ್ಲಿ 2 ವಾಹನಗಳ ಮಾಲೀಕರು ಮಾತ್ರ ದಂಡ ಪಾವತಿಸಿದ್ದಾರೆ ಎಂದು ದಾವಣಗೆರೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ಎಚ್.ಎಸ್. ಮಾಹಿತಿ ನೀಡಿದರು.

ಗುಜರಿ ಸೇರಿದ ವಾಹನಗಳು:

ಸರ್ಕಾರವು ರಿಯಾಯಿತಿಯಡಿ ದಂಡ ಪಾವತಿಗೆ ಸೂಚಿಸಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಅವಧಿಯು ಹಳೆಯದಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 1991ರಿಂದಲೇ ಈ ನಿಯಮವನ್ನು ಅನ್ವಯಿಸಲಾಗಿತ್ತು. 35 ವರ್ಷ ಹಳೆಯ ಲಾರಿ, ಬಸ್ ಸೇರಿದಂತೆ ಇನ್ನಾವುದೇ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿಲ್ಲ. ಈ ಅವಧಿಯ ಹೆಚ್ಚಿನ ವಾಹನಗಳು ಈಗ ಸಕ್ರಿಯವಾಗಿಲ್ಲ.

ಬಹುತೇಕ ವಾಹನಗಳು ಗ್ಯಾರೇಜ್ನಲ್ಲಿ ನಿರುಪಯುಕ್ತ ವಸ್ತುಗಳಾಗಿ ಕೊಳೆಯುತ್ತಿವೆ. ಇನ್ನು ಕೆಲವು ಅಪಘಾತಕ್ಕೆ ಈಡಾಗಿ ಅಥವಾ ಕಳ್ಳತನಕ್ಕೆ ಒಳಗಾಗಿ ಗುಜರಿ ಸೇರಿವೆ. ವಾಹನ ಸಾಲ, ವಿಮೆ, ಸಾಮರ್ಥ್ಯ ಪ್ರಮಾಣಪತ್ರ, ಮಾರಾಟ, ಖರೀದಿ ಕಾರಣಕ್ಕೆ ಬಳಕೆಯಲ್ಲಿರುವ ವಾಹನಗಳ ಮಾಲೀಕರಿಂದ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ. ಉಳಿದ ಕೆಲವು ವಾಹನಗಳು ಅನಧಿಕೃತವಾಗಿ ಓಡಾಡುತ್ತಿದ್ದು, ಬಹುತೇಕವು ಗುಜರಿಗೆ ಆಹಾರವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್ನಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ದಂಡದ ಮೊತ್ತದ ಶೇ 50 ರಿಯಾಯಿತಿಗೂ ಇದೇ ಅವಧಿಯಲ್ಲಿ ಸರ್ಕಾರ ಅವಕಾಶ ಕಲ್ಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.