ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಬರುವಂತೆ ಮಾಡಿ

ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್
Last Updated 11 ಸೆಪ್ಟೆಂಬರ್ 2020, 16:18 IST
ಅಕ್ಷರ ಗಾತ್ರ

ದಾವಣಗೆರೆ: ‘ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಇಲ್ಲದಂತಾಗಿದ್ದು, ರೋಗಿಗಳು ಆಸ್ಪತ್ರೆಗೆ ಬರಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಆಸ್ಪತ್ರೆ ವ್ಯವಸ್ಥೆಯನ್ನು ಸುಧಾರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಇದಕ್ಕೆ ದನಿಗೂಡಿಸಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ, ‘ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಅಲ್ಲಿ ಕೋವಿಡ್ ಚಿಕಿತ್ಸೆಗೆ ₹25 ಸಾವಿರ ತೆರುತ್ತಿದ್ದಾರೆ. ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಹೇಳಿದರು.

‘ಜಿಲ್ಲಾ ಸರ್ಜನ್ ಪ್ರತಿಕ್ರಿಯಿಸಿ, ‘ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 10 ವೆಂಟಿಲೇಟರ್‌ಗಳು ಇದ್ದು, 21 ವೆಂಟಿಲೇಟರ್‌ಗಳನ್ನು ಕಾಯ್ದಿರಿಸಲಾಗಿದೆ. ಮಾನವ ಸಂಪನ್ಮೂಲ ಇಲ್ಲದೇ ಇರುವುದರಿಂದ ಆರಂಭಿಸಿಲ್ಲ. ಶವಗಳನ್ನು ನೋಡಲು ಹಣ ತೆಗೆದುಕೊಳ್ಳುತ್ತಾರೆ ಎಂಬ ದೂರುಗಳು ಬಂದಿದ್ದು, ಈ ಕಾರಣದಿಂದ ಸಂಬಂಧಪಟ್ಟ ವೈದ್ಯಾಧಿಕಾರಿಗೆ ನೋಟಿಸ್ ನೀಡಲಾಗಿದೆ. ಆರೋಪ ಕೇಳಿ ಬಂದಿದ್ದ ‘ಡಿ’ ಗ್ರೂಪ್ ನೌಕರ ಈಗಾಗಲೇ ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್ ಹಣ ಕೇಳುತ್ತಾರೆ’ ಎಂಬ ಆರೋಪದ ಮೇರೆಗೆ ಅನಗತ್ಯವಾಗಿ ನಿಲ್ಲದಂತೆ ಸೂಚನೆ ನೀಡಲಾಗಿದೆ’ ಎಂದರು.

ಡಿಎಚ್ಒ ಡಾ.ರಾಘವೇಂದ್ರಸ್ವಾಮಿ,ನಾಗರಾಜರಾವ್ ಪ್ರತಿಕ್ರಿಯಿಸಿ ‘34 ವೆಂಟಿಲೇಟರ್‌ಗಳು ಇದ್ದು, ಮಾನವ ಸಂಪನ್ಮೂಲದ ಕೊರತೆ ಇದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದು, ಆನಂತರ ಸಮಸ್ಯೆ ಸುಧಾರಿಸುತ್ತದೆ’ ಎಂದರು.

ದೀಪಾ ಜಗದೀಶ್ ಪ್ರತಿಕ್ರಿಯಿಸಿ ‘ನಾನು ಒಬ್ಬರಿಗೆ ವೆಂಟಿಲೇಟರ್ ನೀಡಲು ಹೇಳಿದೆ. ನೀವು ಸೀನಿಯಾರಿಟಿ ಬೇಕುಎಂದು ಹೇಳಿದ್ದೀರಿ, ನೀವು ನೀಡುವುದರೊಳಗೆ ಅವರು ಮೃತರಾದರು. ವೆಂಟಿಲೇಟರ್‌ಗಳು ಸೀನಿಯಾರಿಟಿ ಬೇಕಾ ಎಂದು ದೀಪಾ ಜಗದೀಶ್ ಪ್ರಶ್ನಿಸಿದರು.

ಡಿಎಚ್‌ಒ ಪ್ರತಿಕ್ರಿಯಿಸಿ, ‘ಬೇರೆ ಜಿಲ್ಲೆಗಳಿಂದಲೂ ರೋಗಿಗಳು ಬರುವುದರಿಂದ ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲೇ ದಾಖಲಾಗಿರುವವರಿಗೆ ವೆಂಟಿಲೇಟರ್ ಅಗತ್ಯವಿದ್ದು, ಆಸ್ಪತ್ತೆಯಲ್ಲಿ 12 ಐಸೋಲೇಸರ್ ಆಕ್ಸಿಜನ್‌ಗಳು ಇವೆ. ಕೊನೆಯ ಹಂತದಲ್ಲಿ ಇರುವವರಿಗೆ ವೆಂಟಿಲೇಟರ್ ಅಗತ್ಯವಿರುವುದಿಲ್ಲ. ಉಸಿರಾಟದ ಸಮಸ್ಯೆ ಇರುವವರಿಗೆ ಆದ್ಯತೆ ನೀಡಬೇಕಾಗುತ್ತದೆ. ಕೊನೆಯ ಸಂದರ್ಭ ಬಂದಾಗ ಮಾನವೀಯತೆ ಮೇರೆಗೆ ಕೆಲವರಿಗೆ ನೀಡಿದ್ದೇವೆ. 10 ವೆಂಟಿಲೇಟರ್‌ಗಳನ್ನು ಕಾರ್ಯಾಚರಣೆ ಮಾಡಿದರೆ ಸಮಸ್ಯೆ ಸುಧಾರಿಸುತ್ತದೆ’ ಎಂದರು.

ಬೆಳೆ ಸಮೀಕ್ಷೆ ಶೇ 100ರಷ್ಟು ಗುರಿ ತಲುಪಲಿ

ಆ್ಯಪ್ ಮೂಲಕ ರೈತರಿಂದಲೇ ನಡೆಸುವ ಕಾರ್ಯ ಶೇ 100ರಷ್ಟು ತಲುಪಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಸೆಪ್ಟೆಂಬರ್ ವೇಳೆಗೆ ಶೇ 44ರಷ್ಟು ಮಳೆಯಾಗಿದ್ದು, 40,500 ಕ್ವಿಂಟಲ್ ರಸಗೊಬ್ಬರ ಬಿಡುಗಡೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 18 ಸಾವಿರ ಟನ್ ಯೂರಿಯಾ ಬೇಕಿದ್ದು, 20 ಸಾವಿರ ಟನ್ ದಾಸ್ತಾನು ಇದೆ. ಬೆಳೆ ಸಮೀಕ್ಷೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿ ಇದೆ’ ಎಂದು ಮಾಹಿತಿ ನೀಡಿದರು.

1500 ಹೆಕ್ಟೇರ್‌ನಷ್ಟು ಯಾಂತ್ರೀಕೃತ ಪದ್ಧತಿಯಿಂದ ನಾಟಿಯಾಗಿದೆ. ಕೃಷಿ ಯಂತ್ರೋಪಕರಣ ಬಳಕೆ ಶೇ 4ರಷ್ಟು ಇದೆ.ಭತ್ತದಲ್ಲಿ ಕೀಟಗಳನ್ನು ಜೈವಿಕ ವಿಧಾನಗಳಿಂದ ನಿರ್ವಹಣೆ ಮಾಡಲು ಟ್ರೈಕೋಗ್ರಾಮ ಕೀಟಗಳನ್ನು ಬಳಸುತ್ತಿದ್ದು, ಇದು ಬಂದ ನಂತರರೈತರಿಗೆ ₹4 ಕೋಟಿಯಷ್ಟು ಹಣ ಉಳಿತಾಯವಾಗಿದೆ’ ಎಂದು ಹೇಳಿದರು.

‘ಜೇನು ಕೃಷಿ ಮಾಹಿತಿ ನೀಡಿ’

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೋಮನ್ನರ್ ತೋಟಗಾರಿಕೆ ಇಲಾಖೆ ಮಾಹಿತಿ ನೀಡುವ ಜೇನು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ಭಾಗಮಂಡಲದಲ್ಲಿ ರೈತರಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ತರಬೇತಿ ನೀಡುತ್ತೇವೆ’ ಎಂದರು.

ದೀಪಾ ಜಗದೀಶ್ ಪ್ರತಿಕ್ರಿಯಿಸಿ, ‘ಈ ಕೃಷಿಯ ಬಗ್ಗೆ ನಮಗೆ ಮಾಹಿತಿ ಇಲ್ಲ. ರೈತರಿಗೆ ಹೇಗೆ ತಿಳಿಯಬೇಕು. ಹೆಚ್ಚು ಹೆಚ್ಚು ಪ್ರಚಾರ ಮಾಡಿ’ ಎಂದು ಸಲಹೆ ನೀಡಿದರು.

‘ಜನರಿಕ್ ಮೆಡಿಸಿನ್ ದರಗಳಲ್ಲಿ ವ್ಯತ್ಯಾಸ’

ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ‘ಜನರಿಕ್ ಮೆಡಿಸಿನ್ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿರುವ ಬಗ್ಗೆ ದೂರುಗಳಿವೆ. ಮೆಡಿಸಿನ್ ಮಾರಾಟ ಮಾಡುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಡಿಎಚ್‍ಒ, ಎಲ್ಲ ಜನರಿಕ್ ಅಂಗಡಿಗಳಲ್ಲಿ ಔಷಧಗಳಿಗೆ ಒಂದೇ ದರ ನಿಗದಿಯಾಗಿರುತ್ತದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಲಾಗುವುದು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ‘ಭಾಗ್ಯಲಕ್ಷ್ಮೀ ಯೋಜನೆಯಡಿ 4 ಸಾವಿರ ಬಾಂಡ್ ಬಾಕಿ ಇದೆ. ಬಾಂಡ್ ಮೊತ್ತ ಹೆಚ್ಚಿಗೆಯಾಗಿದ್ದರಿಂದ ತಡವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಮಾತನಾಡಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪಕ್ಕೀರಪ್ಪ, ಉಪಕಾರ್ಯದರ್ಶಿ ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT