ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತ್ಯಾವಣಿಗೆ: ವಸತಿ ರಹಿತರಿಗೆ ನಿವೇಶನ ಹಂಚಲು ಸಹಕರಿಸಿ

Published 8 ಜೂನ್ 2024, 7:22 IST
Last Updated 8 ಜೂನ್ 2024, 7:22 IST
ಅಕ್ಷರ ಗಾತ್ರ

ತ್ಯಾವಣಿಗೆ: ‘ಶಕ್ತರು ದುರಾಸೆ ಕೈಬಿಟ್ಟು ವಸತಿ ರಹಿತರಿಗೆ ನಿವೇಶನ ಹಂಚಲು ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಹೇಳಿದರು.

ತ್ಯಾವಣಿಗೆ ಸಮೀಪದ ಕಶೆಟ್ಟಿಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ 14 ಎಕರೆ ಜಮೀನಿನಲ್ಲಿ ನಿವೇಶನ ರಚಿಸುವ ಸಂಬಂಧ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಮೀನು, ಮನೆ ಹೊಂದಿರುವವರಿಗೆ ವಸತಿ ಇಲ್ಲದವರ ಕಷ್ಟ ಅರ್ಥವಾಗವುದು ತೀರಾ ಅಪರೂಪ. ಭೂಮಿಯನ್ನು ನಾವು ಯಾರೂ ಸೃಷ್ಟಿಸಿಕೊಂಡವರಲ್ಲ. ಪ್ರಕೃತಿಯ ಕೊಡುಗೆ. ತಮ್ಮದನ್ನು ಯಾರು ಬಿಟ್ಟುಕೊಡುವುದು ಬೇಕಿಲ್ಲ. ನಿವೇಶನ ರಚನೆಗೆ ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

‘ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಿ ಬಡವರಿಗೆ ನಿವೇಶನ ನೀಡುವ ಕಾರ್ಯಕ್ಕೆ ಅಡ್ಡಿ ಆದರೆ ನ್ಯಾಯಾಂಗ ನಿಂದನೆಗೆ ಸಿದ್ಧರಾಗಿ ನಿವೇಶನ ಹಂಚಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕಶೆಟ್ಟಿಹಳ್ಳಿ ಹಳೆ ಗ್ರಾಮದ ಗಡಿಯನ್ನು ಗುರುತಿಸುವಂತೆ ಒತ್ತಾಯಿಸಿ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ನಿವೇಶನ ಅಪೇಕ್ಷಿತರು ಗ್ರಾಮದಿಂದ ದಾವಣಗೆರೆಗೆ ಪಾದೆಯಾತ್ರೆ ಹಮ್ಮಿಕೊಂಡಿದ್ದನ್ನು ಗ್ರಾಮಸ್ಥರು ಸ್ಮರಿಸಿದರು.

ಈ ಸಂದರ್ಭದಲ್ಲಿ ಕತ್ತಲಗೆರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಹರುದ್ರಯ್ಯ, ಸದಸ್ಯರಾದ ರಾಮಸ್ವಾಮಿ, ರುದ್ರಮ್ಮ, ಮುಖಂಡರಾದ ಲೋಕೇಶಪ್ಪ, ಹಟ್ಟಿ ಭೀಮನಾಯ್ಕ, ಸೇವಾನಾಯ್ಕ, ವಸಂತಕುಮಾರ್, ಪುರಂದರ, ತಿಪ್ಪಯ್ಯ, ರುದ್ರಯ್ಯ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT