ದಾವಣಗೆರೆ: ನಟ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಗುರುವಾರ ಇಲ್ಲಿನ ಅಶೋಕ ಚಿತ್ರಮಂದಿರ, ತ್ರಿನೇತ್ರ ಚಿತ್ರಮಂದಿರ ಹಾಗೂ ಮೂವಿಟೈಮ್ ಮಲ್ಟಿಪ್ಲೆಕ್ಸ್ನಲ್ಲಿ ಬಿಡುಗಡೆಗೊಂಡಿದೆ. ಮೂರೂ ಕಡೆಗಳಲ್ಲಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಚಿತ್ರ ನೋಡಲು ಆಗಮಿಸಿದ್ದು ನೂಕುನುಗ್ಗಲು ಉಂಟಾಗಿದೆ.

ಕಿಚ್ಚ ಸುದೀಪ್ ಜತೆಗೆ ನಿರೂಪ್ ಭಂಡಾರಿ, ಚಿತ್ಕಳಾ ಬಾರಾದಾರ್, ನೀತಾ ಅಶೋಕ್ ಸಂಹಿತಾ ಮುಂತಾದವರು ನಟಿಸಿರುವ ಈ ಚಿತ್ರ ಬಿಡಗಡೆಗೆ ಮುಂಚೆಯೇ ಭಾರಿ ಪ್ರಚಾರ ಪಡೆದಿರುವುದರಿಂದ ಬಿಡುಗಡೆಗಾಗಿ ಕಿಚ್ಚ ಅಭಿಮಾನಿಗಳು ಕಾದು ಕುಳಿತಿದ್ದರು. ಎರಡು ದಿನಗಳ ಮುಂಚೆಯೇ ಆನ್ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಗುರುವಾರ ಚಿತ್ರಮಂದಿರಗಳಿಗೆ ಬಂದಿದ್ದರು.

ಚಿತ್ರಮಂದಿರಗಳ ಆವರಣದಲ್ಲಿ ಬಾನೆತ್ತರದ ಕಟೌಟ್ಗಳು ನಿಲ್ಲಿಸಿ ಹೂವಿನ ಹಾರಗಳನ್ನು ಹಾಕಲಾಗಿತ್ತು. ಪರದೆಯ ಮೇಲೆ ಸುದೀಪ್ ಕಾಣಿಸುತ್ತಿದ್ದಂತೆ ಶಿಳ್ಳೆಗಳು ಹೊಡೆದು ಅಭಿಮಾನ ಪ್ರದರ್ಶಿಸಿದರು. ಚಿತ್ರಮಂದಿರದ ಆವರಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.