ಬುಧವಾರ, ಜೂನ್ 23, 2021
23 °C

ಎಲ್ಲ ಶಾಸಕರಿಗೂ ಅನುದಾನ ನೀಡಲು ಆಗದು: ಸಚಿವ ಬೈರತಿ ಬಸವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ:ಎಲ್ಲಾ ಶಾಸಕರಿಗೂ ಅನುದಾನ ನೀಡಲು ಸಾಧ್ಯವಿಲ್ಲ. ಇಲಾಖಾವಾರು ಅನುದಾನ ಬಿಡುಗಡೆಯಾದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಲಾಖೆವಾರು ಆಯಾ ಕ್ಷೇತ್ರಕ್ಕೆ ಏನು ಬೇಕೋ ಅದು ಬಂದೇ ಬರುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಮಾತನಾಡಿದ ಸಚಿವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು ಅವರ ಬಾಯಲ್ಲಿ ‘ದರಿದ್ರ ಬಜೆಟ್’ ಎಂಬ ಮಾತು ಬರಬಾರದು ಎಂದೂ ಹೇಳಿದರು. 

ಯಡಿಯೂರಪ್ಪ ಅವರು, ರಾಜ್ಯಕ್ಕೆ ಸುಭೀಕ್ಷವಾದ ಬಜೆಟ್ ನೀಡಿದ್ದು, ರೈಲು ಬಿಡುವಂತಹ ಬಜೆಟ್ ಅಲ್ಲ. ವಸ್ತುಸ್ಥಿತಿಗೆ ಅನುಗುಣವಾಗಿ ಬಜೆಟ್ ಮಾಡಿದ್ದಾರೆ. ಈ ಬಜೆಟ್‌ನಿಂದ ರಾಜ್ಯದ ಅಭಿವೃದ್ಧಿಯಾಗುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

ಎಲ್ಲಾ ಶಾಸಕರಿಗೂ ಕೂಡ ಅನುದಾನ ನೀಡಲು ಸಾಧ್ಯವಿಲ್ಲ. ಇಲಾಖಾವಾರು ಅನುದಾನ ಬಿಡುಗಡೆಯಾದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ.  ಇಲಾಖೆವಾರು ಆಯಾ ಕ್ಷೇತ್ರಕ್ಕೆ ಏನು ಬೇಕೋ ಅದು ಬಂದೇ ಬರುತ್ತದೆ ಎಂದರು.

ದೊರೆಸ್ವಾಮಿಯವರ ಅವರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ವಾತಂತ್ರ್ಯ ಯೋಧರು ಸ್ವಾತಂತ್ರ್ಯ ಯೋಧರ ರೀತಿ ಇರಬೇಕು. ಆ ರೀತಿ ಇದ್ದರೆ ಈ ಎಲ್ಲಾ ಘಟನೆಗಳು ನಡೆಯುತ್ತಿರಲಿಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು