ದಾವಣಗೆರೆ: ಅಲ್ಲಿ ಸಾವಿರಾರು ಮಂದಿ ಮೌಢ್ಯದಲ್ಲಿ ಉರುಳಾಡಿದರು. ವಿದ್ಯಾವಂತರು, ಮಹಿಳೆಯರು, ಪುರುಷರು, ಪುಟ್ಟ ಮಕ್ಕಳು ಎನ್ನದೇ ಅರೆಬೆತ್ತಲೆಯಲ್ಲಿ ಬೇವಿನ ಉಡುಗೆ ಧರಿಸಿ ದೇವಿಗೆ ಸೇವೆ ಸಲ್ಲಿಸಿದರು. ಪುಟ್ಟ ಮಕ್ಕಳು ದುಗ್ಗಮ್ಮ ಉಧೋ... ಉಧೋ... ಎನ್ನುತ್ತಾ ದೇಗುಲ ಸುತ್ತ ತಣ್ಣೀರು ಸುರಿದುಕೊಳ್ಳುತ್ತಾ ಮರಳು ಹಾಕಿದ ನೆಲದ ಮೇಲೆ ಮೌಢ್ಯದಲ್ಲಿ ಉರುಳಾಡಿದರು.

ಸ್ಥಳದಲ್ಲಿಯೇ ಇದ್ದ ಜಿಲ್ಲಾಮಟ್ಟದ ಅಧಿಕಾರಿಗಳೂ ಮೂಕಪ್ರೇಕ್ಷಕರಾದರು. ಶ್ರದ್ಧಾ ಕೇಂದ್ರ ಆಗಬೇಕಿದ್ದ ದೇಗುಲದಲ್ಲಿ ಹಿಂದಿನಕಾಲದ ಆಚರಣೆ ಇಂದಿಗೂ ಇರುವುದು ಪ್ರಜ್ಞಾವಂತರನ್ನು ತಲೆತಗ್ಗಿಸುವಂತೆ ಮಾಡಿತು. ಆದರೆ, ದೇಗುಲದ ಆವರಣಕ್ಕೆ ಸಂಪ್ರದಾಯದಂತೆ ಕೋಣನ ರುಂಡ ತಂದು ಪೂಜೆ ಸಲ್ಲಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಈ ಕಾರಣಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಶ್ಲಾಘನೆ ಒಳಗಾಯಿತು.

ದುಗ್ಗಮ್ಮನ ಜಾತ್ರೆ ಮಧ್ಯ ಕರ್ನಾಟಕ ಭಾಗಕ್ಕೆ ಬಹುದೊಡ್ಡ ಜಾತ್ರೆ. ಜಾತ್ರೆ ಅಂಗವಾಗಿ ಬಲಿ ನೀಡುವ ಪದ್ಧತಿ ಹಿಂದಿನಿಂದಲೂ ಇತ್ತು. ಆದರೆ, ಹೈಕೋರ್ಟ್ ಆದೇಶದಂತೆ ಪ್ರಾಣಿ ಬಲಿ ನಿಷೇಧ ಮಾಡಬೇಕು ಎಂದು ಕಳೆದ ಎರಡು ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರಸಕ್ತ ವರ್ಷ ಅಲ್ಪಮಟ್ಟಿಗೆ ಅದು ಯಶಸ್ವಿಯೂ ಆಯಿತು. ಮಂಗಳವಾರ ಮಧ್ಯರಾತ್ರಿ ನಡೆಯುವ ಈ ಆಚರಣೆಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ರಾತ್ರಿ ಇಡೀ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್, ಸಿಪಿಐ ಎಚ್.ಕೆ.ರೇವಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ವಾಸುದೇವ್, ಪಶು ವೈದ್ಯಾಧಿಕಾರಿಗಳು ಹಾಜರಿದ್ದರು.

ರಾತ್ರಿ 1 ಗಂಟೆಯ ಸುಮಾರಿಗೆ ಉಪ ವಿಭಾಗಧಿಕಾರಿ ಎ.ನಾಗರಾಜ್, ತಹಶೀಲ್ದಾರ್ ಮಂಜುನಾಥ್ ಬಳ್ಳಾರಿ ಆ ತಂಡಕ್ಕೆ ಸೇರ್ಪಡೆಯಾದರೆ, ಕರ್ತವ್ಯದ ಮೇರೆಗೆ ಬೆಂಗಳೂರಿಗೆ ತೆರಳಿದ್ದ ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ ರಾತ್ರಿ 2ಕ್ಕೆ ಬಂದರು.

ದೇಗುಲದ ಎದುರು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ–1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು 1963 ಹಾಗೂ ಹೈಕೋರ್ಟ್ ತೀರ್ಪಿನ ಅನ್ವಯ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ರೀತಿಯ ಬಲಿ ನೀಡುವುದು ಹಾಗೂ ಬೆತ್ತಲೆ ಸೇವೆ ನಿಷೇಧಿಸಲಾಗಿದೆ ಎಂಬ ಬಿತ್ತಿಪತ್ರ ಹಾಕಲಾಗಿತ್ತು. ಕರಪತ್ರ ಹಚ್ಚಲಾಗಿತ್ತು. ಆದರೆ, ಅರೆ ಬೆತ್ತಲೆ ಬೇವಿನ
ಉಡುಗೆ ಸೇವೆ ತಡೆಯಲು ಸಾಧ್ಯವಾಗಲಿಲ್ಲ.

ಏಕೆ ಈ ಸೇವೆ...: ಜಾತ್ರೆಗೆ ಸಾವಿರಾರು ಮಂದಿ ದೂರದ ಊರಿನಿಂದ ಆಗಮಿಸುತ್ತಾರೆ. ಕೆಲವರು ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಬಂದರೆ, ಇನ್ನು ಕೆಲವರು ಹರಕೆ ಸಲ್ಲಿಸಲು ಬರುತ್ತಾರೆ. ಮಕ್ಕಳ ಭಾಗ್ಯ, ಅನಾರೋಗ್ಯ ಹಿನ್ನೆಲೆ, ಸಮಸ್ಯೆ ನಿವಾರಣೆ ಮಾಡುವಂತೆ ಹರಕೆ ಹೊರುತ್ತಾರೆ. ಇವರೆಲ್ಲಾ ಉಪವಾಸ ಇದ್ದು, ಬೇವಿನ ಉಡುಗೆ ತೊಟ್ಟು ತಮ್ಮ ಮನೆಗಳಿಂದಲೇ ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಬಂದು ಹರಕೆ ತೀರಿಸುವುದು ಸಂಪ್ರದಾಯ. ಇದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಅದು ಅಧಿಕಾರಿಗಳ ಸಮ್ಮುಖದಲ್ಲೇ ಈ ವರ್ಷವೂ ಮುಂದುವರಿಯಿತು!

ಕೋಣನ ರುಂಡವೂ... ಮಧ್ಯ ರಾತ್ರಿಯೂ...: ಅದು ಮಧ್ಯರಾತ್ರಿ 2ರ ವೇಳೆ. ದೇಗುಲದ ದೂರದಲ್ಲಿ ಪಟಾಕಿ ಸದ್ದು ಕೇಳಿಬಂತು. ಆಗಲೇ ಸ್ಥಳದಲ್ಲಿದ್ದವರು ಕೋಣನ ಬಲಿ ಆಯಿತು ಎಂದು ಮಾತನಾಡಿಕೊಂಡರು. ಆಗ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಪೊಲೀಸರೂ ಜಾಗೃತರಾದರು. ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಎಸ್ಪಿ ದೇಗುಲದ ಬಳಿಗೆ ತೆರಳಿದರು.

ಮತ್ತೆ ಖಚಿತ ಮಾಹಿತಿ ಪಡೆದುಕೊಂಡು ಅಂಬೇಡ್ಕರ್ ವೃತ್ತದ ಮನೆಯೊಂದರ ಬೆಳಿಗೆ ತೆರಳಿ ಕೋಣನ ರುಂಡ ಹಾಗೂ ಕಾಲು ವಶಕ್ಕೆ ಪಡೆದುಕೊಂಡು ನಿಟ್ಟುಸಿರು ಬಿಟ್ಟರು. ಅದಕ್ಕೂ ಮೊದಲು ದೇಗುಲದ ಆವರಣದಲ್ಲಿ ಯುವಕನೊಬ್ಬನ ಬಟ್ಟೆ ಸಂಪೂರ್ಣ ರಕ್ತಮಯವಾಗಿತ್ತು. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಬಂದೋಬಸ್ತ್ಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ದೇಗುಲದ ಸುತ್ತ ಬ್ಯಾರಿಕೇಡ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

ವಜ್ರಾಭರಣಗಳಿಂದ ಕಂಗೊಳಿಸಿದ ದೇವಿ
ದಾವಣಗೆರೆ: ಮಧ್ಯ ಕರ್ನಾಟಕದ ಪ್ರಸಿದ್ಧವಾಗಿರುವ ನಗರದ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇಗುಲದ ಸುತ್ತಲೂ ದೇವಿಯ ಹೆಸರಲ್ಲಿ ಉರುಳು ಸೇವೆ, ಬೇವಿನ ಉಡುಗೆ ಸೇವೆ ಸೇರಿದಂತೆ ವಿವಿಧ ಹರಕೆ ತೀರಿಸಿದರು. ಮುತ್ತೈದೆಯರು ದುರ್ಗಾಂಬಿಕಾ ದೇವಿಗೆ ದೀಪದಾರತಿ ಮೂಲಕ ಪೂಜೆ ಸಲ್ಲಿಸಿದರೆ, ಪುರುಷರು ಪ್ರದಕ್ಷಿಣೆ ಹಾಕುವ ಮೂಲಕ ಹರಕೆ ತೀರಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರು.

ಜಾತ್ರಾ ಮಹೋತ್ಸವದ ಪ್ರಯುಕ್ತ ದುರ್ಗಾಂಬಿಕೆ ಮೂಲ ವಿಗ್ರಹಕ್ಕೆ ಬೆಳ್ಳಿ–ಬಂಗಾರ ಹಾಗೂ ವಜ್ರ ಖಚಿತ ಕೊರಳ ಹಾರಗಳಿಂದ ಮತ್ತು ಆಭರಣಗಳಿಂದ ಅಲಂಕರಿಸ ಲಾಗಿದ್ದು, ಭಕ್ತರ ಆಕರ್ಷಣೆ ಗಳಿಸಿತ್ತು. ಇದರ ಜತೆಗೆ ಕಲ್ಲೇಶ್ವರ, ಸತ್ಯನಾರಾಯಣ, ವಿಷ್ಣು ದೇವರು ಮೂರ್ತಿಗಳನ್ನು ಬಗೆಬಗೆಯ ಹೂ ಹಾರಗಳಿಂದ ಅಲಂಕರಿಸಲಾಗಿತ್ತು. ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವಿರ ದರ್ಶನ ಪಡೆದು ಭಕ್ತಿಯ ಪರಾಕಾಷ್ಠೆ ಮೆರೆದರು.

ಪಾಲಿಕೆ ಉತ್ಸವದಲ್ಲಿ ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಇದರಿಂದ ಭಕ್ತರು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತರಾಗಿದ್ದರು.

ಭರ್ಜರಿ ವ್ಯಾಪಾರ:  ಇಡೀ ರಾತ್ರಿ ಎಚ್ಚೆತ್ತುಕೊಂಡಿದ್ದ ನಗರದಲ್ಲಿ ಭರ್ಜರಿ ವಹಿವಾಟು ನಡೆಯಿತು. ಮಂಡಿಪೇಟೆ, ಚೌಕಿಪೇಟೆ, ಗಡಿಯಾರ ಕಂಬ, ಹೊಂಡದ ವೃತ್ತಗಳಲ್ಲಿ ಅಂಗಡಿಗಳು ತೆರೆದಿದ್ದವು.

ಕೋಣನ ರುಂಡ ಸಾಗಣೆಗಾಗಿ ಕಲ್ಲು ತೂರಾಟ
ದೇಗುಲದ ದೂರದಲ್ಲಿ ನಡೆದ ಕೋಣನ ವಧೆ ಸಮಯದಲ್ಲಿ ಕಲ್ಲು ತೂರಾಟವೂ ನಡೆದಿದೆ ಎಂದು ಗೊತ್ತಾಗಿದೆ. ರಾತ್ರಿ 2ರ ಸುಮಾರಿಗೆ ನಡೆದ ಕೋಣನ ವಧೆ ಸಮಯದಲ್ಲಿ ಹೆಚ್ಚಿನ ಯುವಕರು ಸೇರಿದ್ದರು. ಕೋಣನ ರುಂಡ ಹಾಗೂ ಮುಂಡ ಸಾಗಿಸಲು ಅನುಕೂಲ ಆಗಲಿ ಎಂದು ಅಲ್ಲಿದ್ದ ಕೆಲವರು ಕಲ್ಲು ತೂರಿದ್ದಾರೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಕೆಲವರು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬ ಯುವಕ ದೇವಸ್ಥಾನ ಆವರಣಕ್ಕೆ ಆಗಮಿಸಿದಾಗ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಸಾವಿರಾರು ಕುರಿ– ಕುಳಿ ಬಲಿ
ದಾವಣಗೆರೆ: ಹಬ್ಬದ ಅಂಗವಾಗಿ ಕುರಿ ಹಾಗೂ ಕೋಳಿ ಬಲಿ ನೀಡಿ ಮನೆಯಲ್ಲಿ ಹಬ್ಬ ಆಚರಣೆ ಮಾಡುವುದು ವಿಶೇಷ. ಈ ಬಾರಿಯೂ 30 ಸಾವಿರಕ್ಕೂ ಹೆಚ್ಚು ಕುರಿ ಬಲಿ ನೀಡಲಾಯಿತು. ಮನೆಯಲ್ಲಿ ಮಾಂಸದಡಿಗೆ ಮಾಡಿ ನೆಂಟರಿಷ್ಟರನ್ನು ಸಂತೃಪ್ತಿಗೊಳಿಸಲಾಯಿತು.

ಹರಿಯಿತು ಮದ್ಯದ ಹೊಳೆ...
ಜಾತ್ರೆಯ ಅಂಗವಾಗಿ ದೇವಸ್ಥಾನದ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಅಂಗಡಿ ಬಂದ್ಗೆ ಜಿಲ್ಲಾಡಳಿತ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ದೂರದ ಅಂಗಡಿಗಳಲ್ಲಿ ಮದ್ಯದ ವ್ಯಾಪಾರ ಬುಧವಾರ ಜೋರಾಗಿತ್ತು. ಕೆಲವರು ವಾರದ ಮುಂಚೆಯೇ ತಂದಿಟ್ಟುಕೊಂಡಿದ್ದರು. ಇನ್ನು ಕೆಲವರು ದೂರದ ಅಂಗಡಿಗಳಿಗೆ ತೆರಳಿ ಮದ್ಯ ಕೊಂಡರು. ಹೀಗಾಗಿ, ಲಕ್ಷಾಂತರ ರೂಪಾಯಿ ವ್ಯಾಪಾರ ಒಂದೇ ದಿನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.