ದಾವಣಗೆರೆ: ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವತಿಯಿಂದ ರೈತರಿಗೆ ಹಲವು ಸಲಹೆಗಳನ್ನು ನೀಡಲಾಗಿದೆ.

ಮುಂಗಾರು ಹಂಗಾಮಿಗಾಗಿ ಒಟ್ಟು 3,40,000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಉತ್ಪಾದನಾ ಕಾರ್ಯಕ್ರಮವಿದೆ. ಈ ಪೈಕಿ 2,51,350 ಹೆಕ್ಟೇರ್ ಏಕದಳ ಧಾನ್ಯ, 17,250 ಹೆಕ್ಟೇರ್ ಬೇಳೆ ಕಾಳುಗಳು, 28,800 ಹೆಕ್ಟೇರ್ ಎಣ್ಣೆಕಾಳುಗಳು, 42,800 ಹೆಕ್ಟೇರ್ ವಾಣಿಜ್ಯ ಬೆಳೆಗಳು ಬಿತ್ತನೆಯಾಗುವ ನಿರೀಕ್ಷೆ ಇದೆ.

ಜಿಲ್ಲೆಗೆ ಏಕದಳ ಧಾನ್ಯ 51,730 ಕ್ವಿಂಟಲ್, ಬೇಳೆ ಕಾಳುಗಳು-942 ಕ್ವಿಂಟಲ್, ಎಣ್ಣೆಕಾಳುಗಳು 6,160 ಕ್ವಿಂಟಲ್ ಬಿತ್ತನೆ ಬೀಜಗಳು ಬೇಕಿದ್ದು, ಈ ಎಲ್ಲ ಬೆಳೆಗಳ ಬಿತ್ತನೆ ಬೀಜಗಳು ಬೇಡಿಕೆಗೆ ಅನುಗುಣವಾಗಿ ಲಭ್ಯವಾಗಲಿವೆ.

ಬಿಟಿ ಹತ್ತಿ ಬೆಳೆ ಅಂದಾಜು 39,000 ಹೆಕ್ಟೇರ್ ಪ್ರದೇಶದಲ್ಲಿ ಬರುವ ನಿರೀಕ್ಷೆ ಇದೆ. ಬಿಟಿ ಹತ್ತಿ ಬೀಜೋತ್ಪಾದನೆ ನೆರೆಯ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಲ್ಲಿ ಆಗುತ್ತದೆ. ನಿರೀಕ್ಷಿತ ಪ್ರಮಾಣದಲ್ಲಿ ಹತ್ತಿ ಬೀಜ ಲಭ್ಯತೆ ನಿರೀಕ್ಷಿಸಿದೆ. ಆದರೆ, ಕೆಲ ತಳಿಗಳ ಬಗ್ಗೆ ಕಳೆದ ಸಾಲಿನ ಬೇಡಿಕೆ ಗಮನಿಸಿದರೆ, ಮಳೆ ಪ್ರಮಾಣ ಕಡಿಮೆ ಅಗಿದ್ದರಿಂದ ಇಷ್ಟಪಟ್ಟು ಪಡೆದ ತಳಿಗಳು ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಕಂಪೆನಿಗಳು ತಮ್ಮ ಮಾರಾಟ ನೀತಿಯ ಅನ್ವಯ ಒದಗಿಸುವ ಬಿತ್ತನೆಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮಳೆ ವಾಡಿಕೆಗಿಂತ ಹೆಚ್ಚಾದಲ್ಲಿ, ಹತ್ತಿ ಬೆಳೆಯಲ್ಲಿ ಗೋಡೆ ಸಾಲು ಪದ್ಧತಿ ಅಳವಡಿಸುವ ಪ್ರಕರಣಗಳಲ್ಲಿ ಇಳುವರಿ ಗಮನಾರ್ಹವಾಗಿ ಕಡಿಮೆ ಆಗುವುದಲ್ಲದೇ, ಮಿರಿಡ್ ತಿಗಣೆಯಂತಹ ಪೀಡೆಗಳು, ಮೊಗ್ಗು ಕೊಳೆ ರೋಗ ಇತ್ಯಾದಿಗಳ ಬಾಧೆ ಕಂಡುಬರುತ್ತದೆ. ಆದ್ದರಿಂದ ಹತ್ತಿಯ ಬಿತ್ತನೆ ಅಂತರ ಕಾಯ್ದುಕೊಂಡಲ್ಲಿ ಈ ತೊಂದರೆ ನೀಗಿಸಲು ಅವಕಾಶವಿದೆ. ರೈತರು ಅನಧಿಕೃತ ಮೂಲಗಳಿಂದ ಬಿತ್ತನೆ ಬೀಜ ಖರೀದಿಸಬಾರದು ಎಂದು ತಿಳಿಸಲಾಗಿದೆ.

ಜಿಲ್ಲೆಯ ಮುಂಗಾರು ರಸಗೊಬ್ಬರ ಹಂಚಿಕೆ 1,09,220 ಟನ್ ಇದೆ. ಜಿಲ್ಲೆಯ ರಸಗೊಬ್ಬರಗಳ ಕಾಪು ದಾಸ್ತಾನು 67,176 ಟನ್ ಇದೆ. ಕೇಂದ್ರ ಸರ್ಕಾರದ ಹಂಚಿಕೆ ಗಮನಿಸಿದರೆ ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ತೃಪ್ತಿಕರವಾಗಿದೆ. ಸಾಗಣೆ ಕಾಲಕ್ಕೆ ರಸಗೊಬ್ಬರ ಚೀಲಗಳಿಗೆ ಹಾನಿಯಾಗುವುದನ್ನು ಗಮನಿಸಲಾಗಿದೆ.

ರಸಗೊಬ್ಬರ ದರ ತೀವ್ರವಾಗಿ ಹೆಚ್ಚುತ್ತಿರುವುದರಿಂದ, ಕಡಿಮೆ ದರದ ರಸಗೊಬ್ಬರಗಳನ್ನು ಸಹಕಾರ ಸಂಘಗಳ ಮೂಲಕ ಆದ್ಯತೆಯ ಮೇಲೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ರಸಗೊಬ್ಬರ ಖರೀದಿ ಸಮಯದಲ್ಲಿ ಕಡ್ಡಾಯವಾಗಿ ಬಿಲ್ಲು ಪಡೆಯಬೇಕು. 2ನೇ ಹಂತದ ಮಾರಾಟಕ್ಕೆ ಅವಕಾಶವಿಲ್ಲ ಮತ್ತು ರಸಗೊಬ್ಬರಗಳು ಸಂಬಂಧಪಟ್ಟ ಕಂಪೆನಿಗಳ ಮಾರಾಟ ನೀತಿಯಂತೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಯಾವುದೇ ಅಡೆತಡೆ ಇಲ್ಲದೇ ರೈತರು ರಸಗೊಬ್ಬರ ಖರೀದಿಸಬಹುದು. ಯಾವುದೇ ಸರ್ಕಾರಿ ಇಲಾಖೆ ರಸಗೊಬ್ಬರ ಮಾರಾಟ ಮಾಡುವುದಿಲ್ಲ. ಆದ್ದರಿಂದ ಅಧಿಕೃತ ಖಾಸಗಿ ಅಥವಾ ಸಹಕಾರಿ ಮಾರಾಟ ಕೇಂದ್ರಗಳಿಂದ ರಸಗೊಬ್ಬರ ಖರೀದಿಸಬೇಕು ಎಂದು ತಿಳಿಸಲಾಗಿದೆ.

ಈ ವರ್ಷ ಸಹ ಜಿಲ್ಲಾಡಳಿತ ಇದುವರೆಗೆ ಲಭ್ಯವಾದ ಗೊಬ್ಬರದ ದಾಸ್ತಾನಿಗೆ ಪೂರ್ಣ ಪ್ರಮಾಣದಲ್ಲಿ ಕ್ರಮ ಕೈಗೊಂಡಿದೆ. ಆದರೆ, ಬೆಳೆಯ ಹಂತ ಮತ್ತು ಪೋಷಕಾಂಶ ಬೇಡಿಕೆ ಗಮನಿಸದೆ ರಸಗೊಬ್ಬರಗಳ ದುಂದು ಬಳಕೆ ಮಾಡಬಾರದು. ಕಳೆದು ಒಂದು ವರ್ಷದಲ್ಲಿ ರಸಗೊಬ್ಬರ ದರಗಳು ಗಮನಾರ್ಹವಾಗಿ ಏರಿಕೆಯಾಗಿದ್ದು, ಅವುಗಳ ವೈಜ್ಞಾನಿಕ ಬಳಕೆಗೆ ರೈತರು ಆದ್ಯತೆ ನೀಡಬೇಕು. ಸಾವಯವ ಗೊಬ್ಬರಗಳ ಸ್ವಯಂ ಉತ್ಪಾದನೆಗೆ ಮುಂದಾಗಿ ಪೋಷಕಾಂಶಗಳ ಸಮರ್ಥ ಬಳಕೆಯ ತಾಂತ್ರಿಕತೆಗಳನ್ನು ರೈತರು ಅಳವಡಿಸಿ ಸಾಗುವಳಿ ವೆಚ್ಚ ಕಡಿಮೆ ಮಾಡುವ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಸುಧಾರಿಸುವತ್ತ ಗಮನಹರಿಸಬೇಕು.

ಜಿಪ್ಸಂ, ಸತುವಿನ ಸಲ್ಫೇಟ್ ಮತ್ತು ಬೋರಾನ್ ಅನ್ನು ಶೇ. 50 ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು, ಪರಿಕರ ವಿತರಣಾ ಕೇಂದ್ರದಿಂದ ಪಡೆಯಬಹುದು. ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ದೂರವಾಣಿ: 08192-230311 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.