ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಮಂದಿಗೆ ಕೃತಕ ಕಾಲು ಜೋಡಣೆ

Last Updated 16 ಫೆಬ್ರುವರಿ 2022, 5:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಖಿಲ ಭಾರತ ಜೈನ್ ಯುವ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್, ಪ್ರಕಾಶಚಂದ ಪ್ಯಾರೆಲಾಲ್ ಭಲಗಟ ಚಾರಿಟಬಲ್ ಟ್ರಸ್ಟ್, ಸೂರಜ್ ಫಾರ್ಮಾ ಹಾಗೂ ದ ಮೆಡಿಸಿನ್ ಹೌಸ್ ಸಹಯೋಗದಲ್ಲಿ, ಪ್ರಕಾಶಚಂದ ಅವರ ತಾಯಿ ಬದಾಮಿಬಾಯಿ ಪ್ಯಾರೆಲಾಲ್‌ಜಿ ಭಲಗಟ ಸ್ಮರಣಾರ್ಥವಾಗಿ ಕಿಮ್ಸ್ ಆವರಣದಲ್ಲಿರುವ ಲಿಂಬ್ ಸೆಂಟರ್‌ನಲ್ಲಿ ಮಂಗಳವಾರ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲುಗಳ ಜೋಡಣಾ ಶಿಬಿರ ನಡೆಯಿತು.

ವಿಜಯಪುರ, ಬಾಗಲಕೋಟೆ, ಹಾವೇರಿ, ಕುಮಟಾ, ಮುಂಡಗೋಡ, ಕೊಪ್ಪಳ, ಅಂಕೋಲಾ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಇಪ್ಪತ್ತು ಅಂಗವಿಕಲರು ಕೃತಕ ಕಾಲುಗಳನ್ನು ಪಡೆದುಕೊಂಡರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಪ್ರಕಾಶಚಂದ ಭಲಗಟ, ‘25 ವರ್ಷಗಳಿಂದ ಮಾನವೀಯ ಸೇವೆ ಮಾಡುತ್ತಿರುವ ಮಹಾವೀರ ಲಿಂಬ್ ಸೆಂಟರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಷಯ. ಮುಂದೆ ಮತ್ತಷ್ಟು ಪ್ರಶಸ್ತಿ ಹಾಗೂ ಗೌರವಗಳು ಸಿಗಲಿ. ಸೆಂಟರ್‌ಗೆ ಏನಾದರೂ ಅಗತ್ಯವಿದ್ದರೆ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಫೆಡರೇಷನ್ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ‘ಭಲಗಟ ಪರಿವಾರದವರು ಗುಡಿ– ಗೋಪುರಗಳಲ್ಲಿ ಕಾಣದ ದೇವರನ್ನು ಅಂಗವಿಕಲರಿಗೆ ಹೊಸ ಜೀವನ ಕಲ್ಪಿಸುವ ಮೂಲಕ ಕಂಡಿದ್ದಾರೆ. ಪ್ರಕಾಶಚಂದ ಅವರು ಲಿಂಬ್ ಸೆಂಟರ್‌ಗೆ ಭೇಟಿ ನೀಡಿ ತಮ್ಮ ಸಲಹೆ– ಸೂಚನೆ ನೀಡಬೇಕು’ ಎಂದು ಮನವಿ ಮಾಡಿದರು.

ಲಿಂಬ್ ಸೆಂಟರ್ ಮುಖ್ಯಸ್ಥ ಗೌತಮ ಗುಲೇಚ್ಛಾ, ಕಾರ್ಯದರ್ಶಿ ಪ್ರಕಾಶ ಕಟಾರಿಯಾ, ಜೀತೇಂದ್ರ ಪೋರವಾಲ, ಕಂಚನದೇವಿ ಭಲಗಟ, ಆಂಜನಾ ಭಲಗಟ, ಪ್ರಣವ ಭಲಗಟ, ಪಾರಿ ಭಲಗಟ, ಸುನೀಲ ಬುರಟ, ಸುಭಾಷ ಡಂಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT