ಹುಬ್ಬಳ್ಳಿ: ಧಾರವಾಡದಲ್ಲಿ ಬಹುನಿರೀಕ್ಷಿತ ಟಾಟಾ ಮೋಟಾರ್ಸ್ ಆಟೊಮೊಬೈಲ್ ಘಟಕ ಸ್ಥಾಪನೆಯಾಗುವ ನಿರೀಕ್ಷೆ ಈಡೇರುವ ಕಾಲ ಸಮೀಪಿಸುತ್ತಿದೆ. ಟಾಟಾ ಮೋಟಾರ್ಸ್ ಸೇರಿದಂತೆ ಐದು ಕಂಪನಿಗಳ ಹೂಡಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ.

ಟಾಟಾ ಮೋಟಾರ್ಸ್ ₹2,044 ಕೋಟಿ ಹೂಡಿಕೆ ಮಾಡಿ ಅಟೊಮೊಬೈಲ್ ಘಟಕ ಸ್ಥಾಪಿಸಲಿದ್ದು, ಸರ್ಕಾರ ಮಮ್ಮಿಗಟ್ಟಿಯಲ್ಲಿ ಆ ಕಂಪನಿಗೆ 326 ಎಕರೆ ಭೂಮಿ ಒದಗಿಸಿದೆ. ಈಗಾಗಲೇ ಟಾಟಾ ಮೋಟಾರ್ಸ್ ಘಟಕ ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸಿದೆ.

ಎಲೆಕ್ಟ್ರಿಕ್ ಬಸ್, ಎಸಿ ಟೆಂಪೊ ಟ್ರಾವಲ್ಸ್, ಸ್ಕೂಲ್ ಬಸ್, ಎಸಿ ಬಸ್ಗಳನ್ನು ಕಂಪನಿ ಉತ್ಪಾದಿಸಲಿದೆ.

ಇದರ ಜತೆಗೆ ಫೆ.14 ರಂದು ನಗರದಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ’ ಸಮಾವೇಶದಲ್ಲಿ ಒಪ್ಪಂದ ಮಾಡಿಕೊಂಡ ನಾಲ್ಕು ಕಂಪನಿಗಳ ಹೂಡಿಕೆ ಪ್ರಸ್ತಾವಕ್ಕೂ ಸರ್ಕಾರ ಒಪ್ಪಿಗೆ ನೀಡಿ, ಭೂಮಿ ಒದಗಿಸಿದೆ. ಒಟ್ಟು ಐದು ಕಂಪನಿಗಳು ಧಾರವಾಡ ಜಿಲ್ಲೆಯಲ್ಲಿ ಅಂದಾಜು ₹2,406.06 ಕೋಟಿ ಹೂಡಿಕೆ ಮಾಡಲಿವೆ.

ಇತರೆ ಕಂಪನಿಗಳು: ಅಬೆಲೆನ್ ಗುಡ್ಸ್ಟೆಪ್ ಲಿ. ಕಂಪನಿ ₹36.28 ಕೋಟಿ, ಮೈಕ್ರೊ ಫಿನಿಶ್ ಟ್ರೇಡಿಂಗ್ ಲಿ. ₹112 ಕೋಟಿ, ಐಯೋನಿಡಿಯಾ ಎಂಟರ್ಪ್ರೈಸೆಸ್ ಸಲ್ಯೂಷನ್ ₹16 ಕೋಟಿ ಮತ್ತು ಮೈಕ್ರೊ ಫಿನಿಶ್ ಪಂಪ್ಸ್ ಪ್ರೈವೇಟ್ ₹33.50 ಕೋಟಿ ಹೂಡಿಕೆ ಮಾಡಲಿವೆ.

‘ಭೂಮಿ ಪಡೆದ ಕಂಪನಿಗಳು ಎರಡು ವರ್ಷದೊಳಗೆ ಘಟಕ ಸ್ಥಾಪಿಸಬೇಕು. ಐದೂ ಘಟಕಗಳು ಆರಂಭವಾದರೆ 1,646 ಮಂದಿಗೆ ನೇರ ಹಾಗೂ 12 ಸಾವಿರ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಲು ಆದ್ಯತೆ ನೀಡಲಾಗಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ, ಕಂಪನಿಗಳ ಜತೆ ಸತತ ಸಂಪರ್ಕ ಇಟ್ಟುಕೊಂಡು ಇಲಾಖೆ ಸ್ಪಂದಿಸಿದ ಪರಿಣಾಮ ಆರು ತಿಂಗಳೊಳಗೆ ಘಟಕ ಸ್ಥಾಪನೆ ಕಾರ್ಯ ಆರಂಭವಾಗುವಂತಾಗಿದೆ ಎಂದು ಕರ್ನಾಟಕ ಉದ್ಯೋಗ ಮಿತ್ರ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.