ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 26ಕ್ಕೆ ಟೈ ಸಮಾವೇಶ: 5 ಸ್ಟಾರ್ಟ್‌ ಅಪ್‌ಗೆ ₹50 ಸಾವಿರ ಬಹುಮಾನ

ಅಧ್ಯಕ್ಷ ವಿಜೇಶ ಸೈಗಲ್
Last Updated 21 ಮಾರ್ಚ್ 2022, 3:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಟೈ ಸಂಸ್ಥೆಯ ವತಿಯಿಂದ ಮಾರ್ಚ್ 26ಕ್ಕೆ ಸ್ಟಾರ್ಟ್‌ ಅಪ್ ಶೃಂಗಸಭೆ, ಮಹಿಳಾ ಮತ್ತು ಟೈಕಾನ್‌ ಸಮಾವೇಶ ನಡೆಯಲಿದೆ’ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ವಿಜೇಶ ಸೈಗಲ್ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಐದು ಸ್ಟಾರ್ಟ್‌ ಅಪ್‌ಗಳಿಗೆ ₹50 ಸಾವಿರ ಬಹುಮಾನ ನೀಡಲಾಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸುವಸ್ಟಾರ್ಟ್‌ ಅಪ್‌ಗಳಿಗೆ ₹10 ಲಕ್ಷದವರೆಗೆ ಹೂಡಿಕೆಯಾಗುವ ಸಾಧ್ಯತೆ ಇದೆ’ ಎಂದರು.

‘ಟೈಕಾನ್‌ನ 10ನೇ ಆವೃತ್ತಿ ಹಾಗೂ ಮಹಿಳಾ ಉದ್ಯಮಿಗಳ 7ನೇ ಸಮಾವೇಶ ಇದ್ದಾಗಿದ್ದು, ಶಾರ್ಕ್ ಟ್ಯಾಂಕ್ ಮಾದರಿಯಲ್ಲಿ ಸ್ಟಾರ್ಟ್‌ ಅಪ್‌ಗಳ ಪಿಚ್ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಮೊದಲ ಐದು ಸ್ಥಾನ ಪಡೆದ ಕಂಪನಿಗಳಿಗೆ ಸಮಾವೇಶದಲ್ಲಿ ನಡೆಯುವ ಇವ್ನಿಂಗ್ ವಿತ್ ಲೆಜೆಂಡ್ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. ಹತ್ತು ವಿಭಾಗದಲ್ಲಿ ವಾರ್ಷಿಕ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದ್ದು, ಈಗಾಗಲೇ 85 ಅರ್ಜಿಗಳು ಬಂದಿವೆ’ ಎಂದು ತಿಳಿಸಿದರು.

‘ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ ಶೆಟ್ಟರ್, ಸಚಿವ ಮುರುಗೇಶ ನಿರಾಣಿ ಭಾಗವಹಿಸಲಿದ್ದಾರೆ. ಇವ್ನಿಂಗ್ ವಿತ್ ಲೆಜೆಂಡ್ಸ್‌ ಕಾರ್ಯಕ್ರಮದಲ್ಲಿ ಇಸ್ಕಾನ್‌ನ ಗೌರಂಗ್ ಪ್ರಭುದಾಸ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್ ದೇವ್ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಭಾಷಣಕಾರರಾಗಿ ಆರ್ಥಿಕ ತಜ್ಞ ಅನಿಲ್ ಲಾಂಬಾ,ಪೆಪ್ಸಿಕೊದ ಶ್ರುತಿ ಜೈಸ್ವಾಲ್, ಲಕ್ಷ್ಮೀ ಅಗರವಾಲ್, ಮುಂಬೈನ ಡಬ್ಬಾವಾಲಾ ಖ್ಯಾತಿಯ ಡಾ. ಪವನ್ ಅಗರವಾಲ್, ಏರ್ ಇಂಡಿಯಾ ಪೈಲೆಟ್ ಕ್ಯಾಪ್ಟನ್ ಜೋಯಾ ಅಗರವಾಲ್ ಭಾಗವಹಿಸಲಿದ್ದಾರೆ. ನಟ ರಾಣಾ ದಗ್ಗುಬಾಟಿ ವರ್ಚ್ಯುವಲ್ ಮೂಲಕ ಮಾತನಾಡಲಿದ್ದಾರೆ’ ಎಂದು ಹೇಳಿದರು.

ಟೈ ಸಂಚಾಲಕ ತರುಣ ಮಹಾಜನ, ಮಹಿಳಾ ಕಾನ್‌ಕ್ಲೇವ್‌ನ ಸಂಚಾಲಕಿ ಪಲ್ಲವಿ ಮಲಾನಿ, ಸ್ಟಾರ್ಟ್‌ ಅಪ್ ಟೈಕಾನ್ ಡಾ. ಪ್ರಕಾಶ ಮುಗಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT