‘ಅನರ್ಹರಿಂದ ಸೌಲಭ್ಯ ಹಿಂಪಡೆಯಲಿ’
‘ಮಂಡಳಿಯ ನಿಯಮದ ಪ್ರಕಾರ ವರ್ಷದಲ್ಲಿ ಕನಿಷ್ಠ 90 ದಿನ ನಿರ್ಮಾಣ ಕೆಲಸದಲ್ಲಿ ಕಾರ್ಮಿಕ ತೊಡಗಿದ್ದರೆ ಕಾರ್ಡ್ ನೀಡಬಹುದು. ಆನಂತರ ಕೆಲವರು ಬೇರೆ ಕೆಲಸದಲ್ಲಿ ತೊಡಗಿದ್ದನ್ನು ಪರಿಗಣಿಸಿ ಕಾರ್ಡ್ ರದ್ದು ಮಾಡಲಾಗಿದೆ. ಅಧಿಕಾರಿಗಳು ಯಾರನ್ನೋ ಕೇಳಿ ಕಾರ್ಡ್ ರದ್ದು ಮಾಡಿದ ಉದಾಹರಣೆಗಳೂ ಇವೆ. ನಮ್ಮ ಗಮನಕ್ಕೆ ಬಂದ ಇಂತಹ ಪ್ರಕರಣಗಳಲ್ಲಿ ಕಾರ್ಮಿಕರಿಂದ ಮರು ಅರ್ಜಿ ಸಲ್ಲಿಸಿ ಕಾರ್ಡ್ ಕೊಡಿಸಿದ್ದೇವೆ’ ಎಂದು ಎಐಯುಟಿಯುಸಿ–ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಹೇಳಿದರು. ‘ಕಾರ್ಮಿಕರು ಇರುವಲ್ಲಿಯೇ ಪರಿಶೀಲನೆ ನಡೆಸಿ ಕಾರ್ಡ್ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಧಿಕಾರಿಗಳು ಹೋದಾಗ ಕಾರ್ಮಿಕ ಅಲ್ಲಿ ಇರಲಿಲ್ಲವೆಂದರೆ ಮತ್ತೆ ಸಮಸ್ಯೆಯಾಗುತ್ತದೆ. ಕಾರ್ಮಿಕ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ದೋಷ ನಿವಾರಣೆ ಸೇರಿದಂತೆ ನಕಲಿ ಕಾರ್ಡ್‌ದಾರರು ಪಡೆದ ಸೌಲಭ್ಯವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.