ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲ ಹಸನು; ಬಿತ್ತನೆ ಬೀಜ ಖರೀದಿ ಜೋರು

ಬಿಡುವು ನೀಡಿದ ಮಳೆ; ಶೇಂಗಾ, ಈರುಳ್ಳಿ, ಹತ್ತಿ, ಭತ್ತ ಕೊಯ್ಲಿಗೆ ಅನುವು
Last Updated 14 ನವೆಂಬರ್ 2019, 16:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೀಪಾವಳಿ ಬಳಿಕ ಮಳೆರಾಯ ವಿರಾಮ ನೀಡಿರುವುದರಿಂದ ಕೃಷಿಕರು ಹೊಲದತ್ತ ಮುಖ ಮಾಡಿದ್ದಾರೆ. ಮುಂಗಾರು, ಹಿಂಗಾರು ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ರೈತರು ಇದೀಗ ಹಿಂಗಾರು ಬಿತ್ತನೆಗೆ ಹೊಲವನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಅಣ್ಣಿಗೇರಿ, ನವಲಗುಂದ, ಕುಂದಗೋಳ, ಹುಬ್ಬಳ್ಳಿ ಭಾಗದಲ್ಲಿ ಹತ್ತಿ, ಜೋಳ ಹಾಗೂ ಅಳ್ನಾವರ, ಕಲಘಟಗಿ ವ್ಯಾಪ್ತಿಯಲ್ಲಿ ಭತ್ತ, ಜೋಳದ ಕೊಯ್ಲು ಇದೀಗ ಆರಂಭಗೊಂಡಿದೆ.

ತಲೆಬೇನೆ:‘ನಿರಂತರ ಮಳೆಯಿಂದಾಗಿ ಹೊಲದಲ್ಲಿ ಕಳೆ ರಾಶಿ, ರಾಶಿ ಬೆಳೆದಿದ್ದು, ಹಸನು ಮಾಡುವುದು ತಲೆಬೇನೆಯಾಗಿದೆ. ಎರಡು ವಾರಗಳಿಂದ ಮಳೆ ತಗ್ಗಿರುವುದರಿಂದ ಹಿಂಗಾರು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ’ ಎಂದು ಬೈರಿದೇವರಕೊಪ್ಪದ ರೈತ ಶಿವಾನಂದ ಮಾಯ್ಕಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಡ್ಡ ಮಳೆ ಬೀಳದಿದ್ದರೆ ಕಡಲೆ ಬಿತ್ತನೆಗೆ ಅನುಕೂಲವಾಗಲಿದೆ. ಜೊತೆಗೆ ಮುಂಗಾರು ಫಸಲಿನ ಕೊಯ್ಲಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.

ಬಿತ್ತನೆ ಗುರಿ:ಜಿಲ್ಲೆಯಲ್ಲಿ 1,93,727 ಹೆಕ್ಟೇರ್‌ನಲ್ಲಿ ಹಿಂಗಾರು ಬಿತ್ತನೆ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಬೀದ್‌ ಎ.ಎ. ‘ಪ್ರಜಾವಾಣಿ’ಗೆ ತಿಳಿಸಿದರು.

ಕಡಲೆ, ಕುಸುಬಿ, ಗೋಧಿ, ಮೆಕ್ಕೆಜೋಳಯನ್ನು ಪ್ರಮುಖವಾಗಿ ಹಿಂಗಾರು ಅವಧಿಯಲ್ಲಿ ಬಿತ್ತನೆ ಮಾಡಲಾಗುತ್ತದೆ. 13 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ಸಂಗ್ರಹವಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT