ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳ್ನಾವರ: ವೃಕ್ಷ ಉದ್ಯಾನ ಲೋಕಾರ್ಪಣೆ

Last Updated 11 ಏಪ್ರಿಲ್ 2022, 14:42 IST
ಅಕ್ಷರ ಗಾತ್ರ

ಅಳ್ನಾವರ: ಬ್ರಿಟಿಷರ ಕಾಲದಿಂದ ಕಟ್ಟಿಗೆ ಇಡಲು ಬಳಕೆಯಾದ ಈ ಸ್ಥಳದಲ್ಲಿನ ದೊಡ್ಡ ವೃಕ್ಷಗಳನ್ನು ರಕ್ಷಿಸಿ ಅವುಗಳ ಮಧ್ಯ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಉದ್ಯಾನ ನಿರ್ಮಿಸಿದ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನ ಉದ್ಘಾಟಿಸಿ ಮಾತನಾಡಿದ ಅವರು ‘ಮಲೆನಾಡಿನ ಹಸಿರಿನ ಮಡಿಲಿನಲ್ಲಿರುವ ಈ ರಮ್ಯ ತಾಣ ಜನರ ಮನಸ್ಸಿಗೆ ಮುದ ನೀಡಲಿದೆ. ಶಿಕ್ಷಣ ಇಲಾಖೆಯವರು ಮಕ್ಕಳನ್ನು ಇಲ್ಲಿಗೆ ಪ್ರವಾಸಕ್ಕೆ ಕರೆ ತರಲಿ. ಇಲ್ಲಿನ ಔಷಧ ಸಸ್ಯಗಳ ವನ ಮುಂದಿನ ಪೀಳಿಗೆಗೆ ಜ್ಞಾನ ಕೊಡುವ ಕೇಂದ್ರವಾಗಲಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ ‘ಪರಿಸರ ಸಂರಕ್ಷಣೆಯಿಂದ ಮಾತ್ರ ಸಮಾಜ, ಮನುಕುಲದ ಉಳಿವು ಸಾಧ್ಯ. ಸಾಲುಮರದ ತಿಮಕ್ಕನ ಹೆಸರಲ್ಲಿ ಉದ್ಯಾನ ಸ್ಥಾಪಿಸಿದರೆ ಸಾಲದು, ಅವರ ಪರಿಸರಪ್ರೇಮ ಅಳವಡಿಸಿಕೊಳ್ಳಬೇಕು’ ಎಂದರು.

ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ₹100 ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್‌ ಆಗಿದ್ದು, ಶೀಘ್ರದಲ್ಲಿ ಕಾಮಗಾರಿಗಳು ಆರಂಭವಾಗಲಿವೆ.

ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ, ಉಪಅರಣ್ಯ ಸಂರಕ್ಷಾಧಿಕಾರಿ ಡಾ. ಅಜ್ಜಯ್ಯ ಜೆ.ಆರ್. ಎಸಿಎಫ್ ವಿನಿತಾ ಚವ್ಹಾಣ, ವಲಯ ಅರಣ್ಯಾಧಿಕಾರಿ ಮಹೇಶ ಹಿರೇಮಠ, ಪ್ರಕಾಶ ಕಮ್ಮಾರ, ತಹಶೀಲ್ದಾರ್ ಅಮರೇಶ ಪಮ್ಮಾರ, ತಾಲ್ಲೂಕು ಪಂಚಾಯ್ತಿ ಇಒ ಸಂತೋಷ ಕುಮಾರ ತಳಕಲ್, ಪ್ರಕಾಶ ಹಾಲಮತ, ಎಂ.ಸಿ. ಹಿರೇಮಠ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್, ಡಾ. ಬಸವರಾಜ ಮೂಡಬಾಗಿಲ್, ಅಮೂಲ ಗುಂಜಿಕರ, ಶ್ರೀಪತಿ ಭಟ್, ಪ್ರವೀಣ ಪವಾರ, ಗುರುರಾಜ ಸಬನೀಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT